ಕಾರ್ಕಳ, ಜೂ. 15 (DaijiworldNews/AA): ಬೆಕ್ಕನ್ನು ರಕ್ಷಿಸಲು ಹೋಗಿ ಬಾವಿಗೆ ಬಿದ್ದ ಅರ್ಚಕರೊಬ್ಬರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ಕಾರ್ಕಳದ ಪುಕ್ಕೇರಿ ಬೈಪಾಸಿನಲ್ಲಿ ಸೋಮವಾರ ಬೆಳಗ್ಗೆ 7:15ರ ವೇಳೆಗೆ ನಡೆದಿದೆ.



ನಾರಾಯಣ ಭಟ್ಟ (48) ಎಂಬುವವರು ಬಾವಿಯೊಳಗೆ ಸಿಲುಕಿಕೊಂಡಿದ್ದರೆ. ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ, ಕೂಡಲೇ ನಾರಾಯಣ ಭಟ್ಟ ಅವರನ್ನು ಬಾವಿಯಿಂದ ಮೇಲಕ್ಕೇತ್ತಿ ರಕ್ಷಿಸಿದ್ದಾರೆ.
ಅಗ್ನಿಶಾಮಕದಳದ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪ್ರಮುಖ ಅಗ್ನಿಶಾಮಕ ದಳದ ರೂಪೇಶ್ ಅವರು ಬಾವಿಗೆ ಇಳಿದು ನಾರಾಯಣ ಭಟ್ಟ ಅವರನ್ನು ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯರಾದ ದಿನೇಶ್, ಭೀಮಪ್ಪ, ಗಣೇಶ್, ಸುರೇಶ್ ಹಾಗೂ ಚಾಲಕ ಮುಜಾಮೀರ್ ಸಹಕರಿಸಿದರು.