ಕಾಸರಗೋಡು, ಜೂ. 17 (DaijiworldNews/AK): ರವಿವಾರ ಸಂಜೆ ಬೇಕಲ ಪಳ್ಳಿಕೆರೆಯಲ್ಲಿ ಸಮುದ್ರಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ. ಸೋಮವಾರಪಲ್ಲಿಕ್ಕರದ ರೆಡ್ ಮೂನ್ ಬೀಚ್ನಲ್ಲಿ ಸಮುದ್ರಕ್ಕೆ ಇಳಿಯುವಾಗ ಮುಳುಗಿ ಸಾವನ್ನಪ್ಪಿದ್ದ ಇಬ್ಬರು ಯುವಕರ ಶವಗಳನ್ನು ಚಿತ್ತಾರಿ ನದಿಯಿಂದ ಹೊರತೆಗೆಯಲಾಗಿದೆ.

ಮೃತಪಟ್ಟ ವಿದ್ಯಾರ್ಥಿಗಳನ್ನು ಕೊಟ್ಟಾಯಂ ಜಿಲ್ಲೆಯ ಚಂಗನಾಶೇರಿಯ ನಿವಾಸಿಗಳಾದ ಅಂಕಿತ್ (20) ಮತ್ತು ಅಪ್ಪು ಟಿ. ಅಬ್ರಹಾಂ (20) ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಈ ಇಬ್ಬರು ಯುವಕರು ತಮ್ಮ ಸ್ನೇಹಿತರೊಂದಿಗೆ ಬೀಚ್ಗೆ ಬಂದು ಸಮುದ್ರಕ್ಕೆ ಇಳಿದಾಗ ಈ ಘಟನೆ ನಡೆದಿದ್ದು, ನೀರಿನ ಹರಿವಿನ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.
ಕರಾವಳಿ ಕಾವಲು ಪಡೆ ಮತ್ತು ಬೇಕಲ್ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆ ಆರಂಭದಲ್ಲಿ ಅವರನ್ನು ಪತ್ತೆಹಚ್ಚಲು ವಿಫಲವಾಗಿತ್ತು. ನಂತರ ಅವರ ಶವಗಳು ಚಿತ್ತಾರಿ ನದಿಯಲ್ಲಿ ಪತ್ತೆಯಾಗಿದ್ದವು. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ ನಂತರ, ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಿದರು.