ಉಳ್ಳಾಲ , ಜೂ. 17 (DaijiworldNews/TA): ನಗರದ ತೊಕ್ಕೊಟ್ಟು ಇಲ್ಲಿನ ಎಬಿಸಿ ಸ್ಪೋರ್ಟ್ಸ್ ಕ್ಲಬ್ ಬಳಿ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನವೊಂದು ನೇರವಾಗಿ ಕ್ಲಬ್ನ ಎದುರುಗಡೆ ನಿಲ್ಲಿಸಲಾದ ವಾಹನಗಳಿಗೆ ಡಿಕ್ಕಿಯಾದ ಘಟನೆ ನಡೆದಿದೆ.

ಅಪಘಾತದ ವೇಳೆ ಸ್ಕೂಟರ್ನಲ್ಲಿ ಒಟ್ಟು ನಾಲ್ಕು ಜನ ಯುವತಿಯರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಚಾಲಕಿಯ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆಯಿಂದ ನೇರವಾಗಿ ಕ್ಲಬ್ನ ಎದುರುಗಡೆ ನಿಲ್ಲಿಸಲಾದ ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ದೃಶ್ಯಾವಳಿಗಳನ್ನು ಗಮನಿಸಿದರೆ ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡುಬರುತ್ತಿದೆ. ನಾಲ್ವರು ಯುವತಿಯರು ಕೂಡ ಕನಿಷ್ಠ ಪಕ್ಷ ಹೆಲ್ಮೆಟ್ ಕೂಡ ಧರಿಸಿಲ್ಲ. ಲಭ್ಯವಾಗಿರುವ ಮಾಹಿತಿ ಪ್ರಕಾರ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.