ಮಂಗಳೂರು, ಜೂ. 18 (DaijiworldNews/AK): ಮಲಬಾರ್ ಗ್ರೂಪ್ನ 'ಹಂಗರ್ ಫ್ರೀ ವರ್ಲ್ಡ್' (ಹಸಿವು ಮುಕ್ತ ಪ್ರಪಂಚ) ಯೋಜನೆ ಒಂದು ಮಹತ್ವದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮವಾಗಿದೆ.ಈ ಯೋಜನೆಯ ಅಂಗವಾಗಿ ಇದೀಗ ಬಟ್ಟೆ ವಿತರಣಾ ಅಭಿಯಾನ ಆರಂಭವಾಗಿದೆ.



ಈ ಕ್ಲೋಥಿಂಗ್ ಚಾಲೆಂಜ್ ಇನಿಶಿಯೇಟಿವ್ ಅಡಿಯಲ್ಲಿ, ಮಂಗಳೂರು, ಉಡುಪಿ ಮತ್ತು ಸುತ್ತಮುತ್ತಲಿನ ಶಾಖೆಗಳಲ್ಲಿ ಬಟ್ಟೆ ವಿತರಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಅಭಿಯಾನವನ್ನು ಸಿರಾಜುದ್ದೀನ್ ವೈ (ಹಂಗರ್ ಫ್ರೀ ವರ್ಲ್ಡ್ ಪ್ರಾಜೆಕ್ಟ್ ಸಂಯೋಜಕರು), ಇಕ್ಬಾಲ್ (ವಿತರಣಾ ಸಿಬ್ಬಂದಿ), ಹಫೀಜ್ ರೆಹಮಾನ್ (ಮಲಬಾರ್ ಸ್ಟೋರ್ ಮುಖ್ಯಸ್ಥರು, ಮಂಗಳೂರು) ಮತ್ತು ಮಲಬಾರ್ ಸಿಬ್ಬಂದಿ ಸದಸ್ಯರು ಪರಿಚಯಿಸಿದ್ದಾರೆ.
ಇಲ್ಲಿಯವರೆಗೆ, 1,000 ಕ್ಕೂ ಹೆಚ್ಚು ಬಟ್ಟೆಗಳನ್ನು ವಿತರಿಸಲಾಗಿದ್ದು, ಮಹಿಳೆಯರು, ಮಕ್ಕಳು, ಪುರುಷರು, ಕೊಳೆಗೇರಿ ಸಮುದಾಯಗಳಲ್ಲಿ ವಾಸಿಸುವ ಕುಟುಂಬಗಳು ಮತ್ತು ಬೀದಿಬದಿ ವಾಸಿಸುವ ನಿರ್ಗತಿಕರಿಗೆ ಸೇರಿದಂತೆ 300 ಕ್ಕೂ ಹೆಚ್ಚು ಮಂದಿ ನೇರವಾಗಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಸಮಾಜದ ದುರ್ಬಲ ವರ್ಗಗಳಿಗೆ ಅಗತ್ಯ ಬಟ್ಟೆ ಮತ್ತು ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಅವರ ಘನತೆ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬಟ್ಟೆ ಸಂಗ್ರಹ ಅಭಿಯಾನಗಳು ಇನ್ನೂ ವಿವಿಧ ಸ್ಥಳಗಳಲ್ಲಿ ನಡೆಯುತ್ತಿವೆ ಮತ್ತು ಹೆಚ್ಚಿನ ಫಲಾನುಭವಿಗಳಿಗೆ ಬೆಂಬಲ ನೀಡಲು ಮುಂಬರುವ ವಾರಗಳಲ್ಲಿ ಹೆಚ್ಚುವರಿ ಬಟ್ಟೆ ವಿತರಣಾ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದೆ.
ಈ ಕಾರ್ಯಕ್ರಮವು ಮಲಬಾರ್ ಗ್ರೂಪ್, ದಯಾ ಪುನರ್ವಸತಿ ಟ್ರಸ್ಟ್ ಮೂಲಕ ಜಾರಿಗೆ ತಂದಿರುವ ಹಸಿವು ಮುಕ್ತ ಪ್ರಪಂಚ ಯೋಜನೆಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ಸಮುದಾಯ ಕಲ್ಯಾಣ, ಸಾಮಾಜಿಕ ಜವಾಬ್ದಾರಿ ಮತ್ತು ಸೌಲಭ್ಯ ವಂಚಿತ ಸಮುದಾಯಗಳ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರುವ ಗುರಿಯನ್ನು ಹೊಂದಿದೆ.