ಮಂಗಳೂರು: ಮುಕುಂದ್ ರಿಯಾಲ್ಟಿಯ ಕೇದಾರ್ ಹೈ ಲಿವಿಂಗ್ ಲಕ್ಸುರಿ ಹೋಮ್ಸ್ ಉದ್ಘಾಟನೆ
Sat, Jun 20 2026 12:23:45 PM
ಮಂಗಳೂರು, ಜೂ. 20 (DaijiworldNews/AA): ನಗರದ ದೇರೆಬೈಲ್ನ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಮುಕುಂದ್ ರಿಯಾಲ್ಟಿಯ ಪ್ರತಿಷ್ಠಿತ ವಸತಿ ಯೋಜನೆ ಕೇದಾರ್ ಹೈ ಲಿವಿಂಗ್ ಲಕ್ಸುರಿ ಹೋಮ್ಸ್ನ್ನು ಮಾಜಿ ಮೇಯರ್ ಶಶಿಧರ್ ಹೆಗ್ಡೆ ಹಾಗೂ ಭೂ ಮಾಲೀಕರಾದ ಎಲಿಯಾಸ್ ಸ್ಯಾಂಕ್ಟಿಸ್ ಅವರು ಗುರುವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಕುಂದ್ ರಿಯಾಲ್ಟಿಯ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ, ಗುಣಮಟ್ಟ, ಆರಾಮದಾಯಕತೆ ಹಾಗೂ ದೀರ್ಘಕಾಲೀನ ಮೌಲ್ಯವನ್ನು ಒದಗಿಸುವ ಬದ್ಧತೆಯೊಂದಿಗೆ ಯೋಜನೆ ನಿರ್ಮಿಸಲಾಗಿದೆ. ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಹಕರಿಸಿದ ಮನೆ ಖರೀದಿದಾರರು, ಸಲಹೆಗಾರರು, ಗುತ್ತಿಗೆದಾರರು ಹಾಗೂ ಪಾಲುದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಚೇತನ್ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥಾಪಕ ಚೇತನ್ ನಾಯಕ್, ಮುಖ್ಯ ವಾಸ್ತುಶಿಲ್ಪಿ ಸುರೇಶ್ ಪೈ, ಮುಕುಂದ್ ರಿಯಾಲ್ಟಿಯ ವ್ಯವಸ್ಥಾಪಕ ಪಾಲುದಾರರಾದ ಮಹೇಶ್ ಶೆಟ್ಟಿ, ಮಂಗಲ್ದೀಪ್ ಎ.ಆರ್. ಮೊದಲಾದವರು ಉಪಸ್ಥಿತರಿದ್ದರು. ಗೃಹ ಮಾಲೀಕರು, ಗಣ್ಯರು, ಸಲಹೆಗಾರರು, ಗುತ್ತಿಗೆದಾರರು, ಚಾನೆಲ್ ಪಾಲುದಾರರು ಹಾಗೂ ಆಹ್ವಾನಿತ ಅತಿಥಿಗಳು ಭಾಗವಹಿಸಿದ್ದರು.
ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಈ ಯೋಜನೆ ಐಷಾರಾಮಿ ಜೀವನಶೈಲಿ, ಉತ್ತಮ ಸಂಪರ್ಕ ವ್ಯವಸ್ಥೆ ಹಾಗೂ ಆಧುನಿಕ ಸೌಲಭ್ಯಗಳ ಸಮನ್ವಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಯೋಜನೆಯಲ್ಲಿ ಪ್ರೀಮಿಯಂ ಅಪಾರ್ಟ್ಮೆಂಟ್ಗಳ ಜೊತೆಗೆ ಸೀಮಿತ ಸಂಖ್ಯೆಯ ಡುಪ್ಲೆಕ್ಸ್ ಮನೆಗಳೂ ಸೇರಿವೆ.
ಯೋಜನೆಯ ಪ್ರಮುಖ ಆಕರ್ಷಣೆಯಾಗಿ ರೂಫ್ಟಾಪ್ ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣಗೊಂಡಿದ್ದು, ಇಲ್ಲಿಂದ ನಗರದ ಸ್ಕೈಲೈನ್, ಹಸಿರು ಪರಿಸರ ಹಾಗೂ ಸಮುದ್ರ ತೀರದ ಮನೋಹರ ನೋಟವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ ಮಕ್ಕಳ ಆಟದ ಮೈದಾನ, ಓಪನ್ ಜಿಮ್ನಾಷಿಯಂ, ಬ್ಯಾಡ್ಮಿಂಟನ್ ಕೋರ್ಟ್, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯಗಳು, ಗ್ರಂಥಾಲಯ, ಕಾರ್ಡಿಯೋ ವಲಯ, ಬಹುಉದ್ದೇಶ ಸಭಾಂಗಣ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಮಹತ್ವದ ಮೈಲುಗಲ್ಲು: ಕೇದಾರ್ ಹೈ ಲಿವಿಂಗ್ ಲಕ್ಸುರಿ ಹೋಮ್ಸ್ನ ಉದ್ಘಾಟನೆಯು ಮುಕುಂದ್ ರಿಯಾಲ್ಟಿಯ ಸಾಧನೆಯ ಪಯಣದಲ್ಲಿ ಒಂದು ಪ್ರಮುಖ ಘಟ್ಟವನ್ನು ಸೂಚಿಸುತ್ತದೆ. ಗುಣಮಟ್ಟ, ನವೀನತೆ ಮತ್ತು ಗ್ರಾಹಕ ತೃಪ್ತಿಗೆ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿರುವ ಸಂಸ್ಥೆ, ವಾಸ್ತುಶಿಲ್ಪದ ಶ್ರೇಷ್ಠತೆ, ಆಧುನಿಕ ಜೀವನಶೈಲಿ ಸೌಲಭ್ಯಗಳು ಹಾಗೂ ದೀರ್ಘಕಾಲಿಕ ಸುಸ್ಥಿರತೆಯನ್ನು ಒಳಗೊಂಡ ವಸತಿ ಮತ್ತು ವಾಣಿಜ್ಯ ಯೋಜನೆಗಳ ಮೂಲಕ ಮಂಗಳೂರಿನ ನಗರಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ.