ಉಡುಪಿ, ಜು. 27 (DaijiworldNews/AA): ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ದೊರೆತಿರುವ ಅಭೂತಪೂರ್ವ ಪ್ರತಿಕ್ರಿಯೆಯನ್ನು ಪರಿಗಣಿಸಿ, ಕಿಶೂ ಎಂಟರ್ಪ್ರೈಸಸ್ ಆಶ್ರಯದಲ್ಲಿ ದಾಯ್ಜಿವಲ್ಡ್ ಉಡುಪಿ ಸ್ಟುಡಿಯೋ ಆಯೋಜಿಸುತ್ತಿರುವ ಅಂತರಶಾಲಾ ರಸಪ್ರಶ್ನೆ ಸ್ಪರ್ಧೆ 'ದಾಯ್ಜಿವರ್ಲ್ಡ್ ಚಾಣಕ್ಷ ಚಾಲೆಂಜ್ – ಸೀಸನ್ 4'ರ ನೋಂದಣಿ ಅವಧಿಯನ್ನು ಮಂಗಳವಾರ, ಜುಲೈ 28ರವರೆಗೆ ವಿಸ್ತರಿಸಲಾಗಿದೆ.

ಸ್ಪರ್ಧೆಯ ಆಡಿಷನ್ ಸುತ್ತು ಆಗಸ್ಟ್ 2, 2026, ಭಾನುವಾರ, ಉಡುಪಿಯಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್ನಲ್ಲಿ ಮಧ್ಯಾಹ್ನ ನಡೆಯಲಿದೆ.
ಹಿಂದಿನ ಮೂರು ಆವೃತ್ತಿಗಳಿಗೆ ವಿದ್ಯಾರ್ಥಿಗಳಿಂದ ದೊರೆತ ಅತ್ಯುತ್ತಮ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ, ದಾಯ್ಜಿವಲ್ಡ್ ಉಡುಪಿ ಸ್ಟುಡಿಯೋ ಇದೀಗ ಇನ್ನಷ್ಟು ವೈಶಿಷ್ಟ್ಯಪೂರ್ಣ ಹಾಗೂ ರೋಚಕ ನಾಲ್ಕನೇ ಆವೃತ್ತಿಯನ್ನು ಆಯೋಜಿಸಲು ಸಜ್ಜಾಗಿದೆ. ಈ ಸ್ಪರ್ಧೆಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಕುತೂಹಲ, ವಿಮರ್ಶಾತ್ಮಕ ಚಿಂತನೆ ಹಾಗೂ ಆರೋಗ್ಯಕರ ಶೈಕ್ಷಣಿಕ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವುದರ ಜೊತೆಗೆ, ತಮ್ಮ ಜ್ಞಾನವನ್ನು ವಿಶಾಲ ವೇದಿಕೆಯಲ್ಲಿ ಪ್ರದರ್ಶಿಸಲು ಅವಕಾಶ ಕಲ್ಪಿಸುವುದಾಗಿದೆ.
ರಸಪ್ರಶ್ನೆಯಲ್ಲಿ ಸಾಮಾನ್ಯ ಜ್ಞಾನ, ಇತಿಹಾಸ, ಪ್ರಚಲಿತ ವಿದ್ಯಮಾನಗಳು, ವಿಜ್ಞಾನ, ಕ್ರೀಡೆ, ವ್ಯಾಕರಣ ಹಾಗೂ ಇತರ ಸಂಬಂಧಿತ ವಿಷಯಗಳನ್ನು ಒಳಗೊಂಡ ಪ್ರಶ್ನೆಗಳು ಕೇಳಲಾಗುತ್ತವೆ. ಆಡಿಷನ್ನಲ್ಲಿ ಆಯ್ಕೆಯಾಗುವ ತಂಡಗಳು ದಾಯ್ಜಿವಲ್ಡ್ ಉಡುಪಿ ಸ್ಟುಡಿಯೋದಲ್ಲಿ ನಡೆಯುವ ಸ್ಟುಡಿಯೋ ಸುತ್ತುಗಳಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದು, ಈ ಕಾರ್ಯಕ್ರಮವು ಪ್ರತಿವಾರ ಸಂಚಿಕೆ ರೂಪದಲ್ಲಿ ದಾಯ್ಜಿವರ್ಲ್ಡ್ 24x7ವಾಹಿನಿಯಲ್ಲಿ ಪ್ರಸಾರಗೊಳ್ಳಲಿವೆ.
ಖ್ಯಾತ ಲ್ವಿಜ್ ಮಾಸ್ಟರ್ ಹಾಗೂ ಜನಪ್ರಿಯ ನಿರೂಪಕ ಆಲ್ವಿನ್ ದಾಂತಿ ಪೆರ್ನಾಲ್ಅವರು ಈ ಸ್ಪರ್ಧೆಯ ನಾಲ್ಕನೇ ಆವೃತ್ತಿಯನ್ನು ನಿರೂಪಿಸಲಿದ್ದು, ಸ್ಪರ್ಧಿಗಳನ್ನು ವಿವಿಧ ಸವಾಲಿನ ಹಾಗೂ ರೋಚಕ ಸುತ್ತುಗಳ ಮೂಲಕ ಮುನ್ನಡೆಸಲಿದ್ದಾರೆ.
ನಿಯಮಗಳು ಮತ್ತು ಷರತ್ತುಗಳು
* ಈ ಸ್ಪರ್ಧೆಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಮುಕ್ತವಾಗಿದೆ.
* ಪ್ರತಿ ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಇರಬೇಕು.
* ಪ್ರತಿ ಶಾಲೆಯಿಂದ ಗರಿಷ್ಠ 5 ತಂಡಗಳು ಮಾತ್ರ ನೋಂದಾಯಿಸಬಹುದು.
* ಅಗತ್ಯ ಮಾಹಿತಿಗಳೊಂದಿಗೆ ನಿಗದಿತ ಅವಧಿಯೊಳಗೆ ನೋಂದಣಿ ಪೂರ್ಣಗೊಳಿಸಬೇಕು.
* ಆಡಿಷನ್ ಸುತ್ತಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ 50 ಬಹು ಆಯ್ಕೆ (MCQ) ಪ್ರಶ್ನೆಗಳಿರುತ್ತವೆ.
* ಪರೀಕ್ಷೆಯ ಅವಧಿ 60 ನಿಮಿಷಗಳು (+15 ನಿಮಿಷ ಆಡಳಿತಾತ್ಮಕ ಮತ್ತು ಉತ್ತರಪತ್ರಿಕೆ ಸಲ್ಲಿಕೆಗಾಗಿ).
* ಅತ್ಯುತ್ತಮ ಸಾಧನೆ ಮಾಡಿದ ತಂಡಗಳು ಸ್ಟುಡಿಯೋ ಸುತ್ತಿಗೆ ಆಯ್ಕೆಯಾಗುತ್ತವೆ.
* ಎಲ್ಲಾ ಭಾಗವಹಿಸುವವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರ ನೀಡಲಾಗುತ್ತದೆ.
* ಸ್ಟುಡಿಯೋ ಸುತ್ತುಗಳು ಮುಖ್ಯವಾಗಿ ಕನ್ನಡದಲ್ಲಿ ನಡೆಯಲಿದ್ದು, ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಇರಲಿವೆ.
* ಕ್ವಿಜ್ ಮಾಸ್ಟರ್ ಹಾಗೂ ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ.
* ಭಾಗವಹಿಸುವ ವಿದ್ಯಾರ್ಥಿಗಳೊಂದಿಗೆ ಪೋಷಕರು ಅಥವಾ ಶಿಕ್ಷಕ ಸಂಯೋಜಕರು ಕಡ್ಡಾಯವಾಗಿ ಹಾಜರಿರಬೇಕು.
* ಅನಿವಾರ್ಯ ಸಂದರ್ಭಗಳಲ್ಲಿ ಸ್ಪರ್ಧೆಯಲ್ಲಿ ಬದಲಾವಣೆ ಮಾಡುವ, ಮುಂದೂಡುವ ಅಥವಾ ರದ್ದುಗೊಳಿಸುವ ಹಕ್ಕನ್ನು ಆಯೋಜಕರು ಕಾಯ್ದಿರಿಸಿದ್ದಾರೆ.
ನೋಂದಣಿ ಪೂರ್ಣಗೊಂಡ ನಂತರ ವರದಿ ಸಮಯ ಹಾಗೂ ಪರೀಕ್ಷಾ ವಿಧಾನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಭಾಗವಹಿಸುವವರಿಗೆ ತಿಳಿಸಲಾಗುವುದು.
ಭಾಗವಹಿಸಲು ಆಸಕ್ತ ವಿದ್ಯಾರ್ಥಿಗಳುwww.daijiworldudupi.com/cc4 ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ನೋಂದಣಿಗೆ ಕೊನೆಯ ದಿನಾಂಕ: ಮಂಗಳವಾರ, ಜುಲೈ 28, 2026.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ದಾಯ್ಜಿವರ್ಲ್ಡ್ ಉಡುಪಿ
3ನೇ ಮಹಡಿ, ಮಾಂಡವಿ ಟ್ರೇಡ್ ಸೆಂಟರ್,
ಕಡಿಯಾಳಿ, ಉಡುಪಿ – 576102.
ಮೊಬೈಲ್: +91 73386 37690 / +91 99001 61556
ಇ-ಮೇಲ್:contestdwudupi@gmail.com