ಬಂಟ್ವಾಳ, ಜು. 28 (DaijiworldNews/TA): ಸೈನಿಕರನ್ನು ಗೌರವಿಸುವುದು ದೇಶವನ್ನು ಗೌರವಿಸಿದಂತೆ. ದೇಶ ಸೇವೆ ಮತ್ತು ಶಿಸ್ತು ಜೀವನದಲ್ಲಿ ಅರ್ಥಪೂರ್ಣವಾಗಬೇಕು ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಮೋನಪ್ಪ ಪೂಜಾರಿ ಬಿ.ಎಂ. ಹೇಳಿದರು.




ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬದಲ್ಲಿ ನಡೆದ 'ಕಾರ್ಗಿಲ್ ವಿಜಯ ದಿವಸ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಜಯೋತ್ಸವದ ನೆನಪಿಗಾಗಿ ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಟ್ಟರು. ಇದೇ ವೇಳೆ ಮೋನಪ್ಪ ಪೂಜಾರಿ ಹಾಗೂ ನಿವೃತ್ತ ಆರೋಗ್ಯ ಸುರಕ್ಷಣಾಧಿಕಾರಿ ಸುಮತಿ ಮೋನಪ್ಪ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸ, ಶಿಕ್ಷಕ ತೌಸೀಫ್ ಅಹ್ಮದ್, ಪಿಡಿಒ ಶಂಬು ಶರ್ಮ ಹಾಗೂ ಮಾಜಿ ಸೈನಿಕರು ಉಪಸ್ಥಿತರಿದ್ದರು.