ಸುಳ್ಯ, ಜು. 28 (DaijiworldNews/TA): ತಾಲೂಕಿನಲ್ಲಿ ಕೆಲವು ದಿನಗಳಿಂದ ಕಾಡಾನೆಗಳು ರೈತರ ತೋಟಗಳಿಗೆ ನುಗ್ಗಿ ಅಪಾರ ಬೆಳೆ ನಾಶ ಮಾಡುತ್ತಿದ್ದು ಇದರಿಂದ ತಾಲೂಕಿನ ರೈತರು ಆರ್ಥಿಕ ನಷ್ಟಕ್ಕೆ ಒಳಗಾಗುತ್ರಿದ್ದಾರೆ.




ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಬೆಳಿಗ್ಗಿನ ಜಾವ ರೈತರ ತೋಟಗಳಿಗೆ ನುಗ್ಗಿದ ಕಾಡಾನೆಗಳು ಬಾಳೆ ಮತ್ತು ತೆಂಗಿನ ಮರಗಳನ್ನು ಎಳೆದು ಹಾಕಿ ನಾಶ ಪಡಿಸಿದ ಘಟನೆ ನಡೆದಿದೆ. ಈಗಾಗಲೇ ಅಡಿಕೆ ಎಲೆ ಹಳದಿ ರೋಗದಿಂದ ಕಂಗೆಟ್ಟಿದ್ದು ಇದೀಗ ಕಾಡಾನೆಗಳ ಉಪಟಳ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.