ಪುತ್ತೂರು, ಆ. 15 (DaijiworldNews/AK): ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಕೆಯ್ಯೂರು ಗ್ರಾಮದ ಬೊಳಿಕ್ಕಳದ ನೆಲ್ಲಿಗುರಿ ಬಳಿ ಆಗಸ್ಟ್ 15 ರ ಶನಿವಾರದಂದು ಸಂಭವಿಸಿದೆ.

ಮೃತರನ್ನು ಬೈಕ್ ಸವಾರ ಅಭಿಲಾಷ್ (24) ಎಂದು ಗುರುತಿಸಲಾಗಿದೆ.
ಮಾಡವುಕಟ್ಟೆಯಿಂದ ಸವಣೂರು ಕಡೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್, ಸವಣೂರಿನಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಬೈಕಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಮೃತರು ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.