ಮಂಗಳೂರು, ಸೆ. 10 (DaijiworldNews/AK): ಬಳಕುಂಜೆಯ ಸಂತ ಪೌಲರ ದೇವಾಲಯದ ಫಾತಿಮಾ ವಾಳೆ ,ಕೊಲ್ಲೂರುನಲ್ಲಿ ಸರ್ವಧರ್ಮೀಯರ ಸೌಹಾರ್ದತೆಯ ಸಂಕೇತವಾಗಿ ಮೊಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮೊಂತಿ ಮರಿಯಮ್ಮನ ಜನ್ಮದಿನದ ಶುಭ ಸಂಭ್ರಮದ ಅಂಗವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಪೌಲರ ದೇವಾಲಯದ ಧರ್ಮಗುರುಗಳಾದ ವಂ.ಪಾವ್ಲ್ ಸಿಕ್ವೇರಾ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂತಹ ಸೌಹಾರ್ದ ಕಾರ್ಯಕ್ರಮಗಳು ಸಮಾಜದಲ್ಲಿ ಪರಸ್ಪರ ಪ್ರೀತಿ, ಸಹಬಾಳ್ವೆ ಮತ್ತು ಸಾಮರಸ್ಯವನ್ನು ಬೆಳೆಸುತ್ತವೆ. ಧರ್ಮದ ಗಡಿಗಳನ್ನು ಮೀರಿ *ಮಾನವ ಧರ್ಮದ ಆಧಾರದ ಮೇಲೆ ಎಲ್ಲರೂ ಒಂದಾಗಿ ಬಾಳುವಂತಾಗಬೇಕು* ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಲ್ಲೂರು ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಉಳೆಪಾಡಿ* ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ.) ಇದರ ಕಾರ್ಯದರ್ಶಿ *ಶಂಶುದ್ಧೀನ್ ದೊಡ್ಡಕೆರೆ* ಅವರು ಭಾಗವಹಿಸಿ, ಬಳಕುಂಜೆ ಗ್ರಾಮದ ಸೌಹಾರ್ದಯುತ ವಾತಾವರಣವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಾಳೆಯ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಮಸ್ತ ಬಾಂಧವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ *ಸರ್ವಧರ್ಮೀಯರು ಒಂದಾಗಿ ಪಾಲ್ಗೊಂಡು, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಸಹಭೋಜನದಲ್ಲಿ ಭಾಗವಹಿಸಿದ್ದು* ಸೌಹಾರ್ದತೆಯ ಸಂದೇಶವನ್ನು ಸಾರಿತು.
ಕಾರ್ಯಕ್ರಮದಲ್ಲಿ ಬಳಕುಂಜೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ರೋಶನ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿ ಡಿಸೋಜಾ, ಸ್ಥಳೀಯ ಕಾನ್ವೆಂಟ್ ಸುಪೀರಿಯರ್ ಸಿ.ಫೆಲ್ಸಿನ್ ,ವಾಳೆಯ ಪ್ರತಿನಿಧಿಗಳಾದ ರೊನಾಲ್ಡ್ ಸೆರಾವೊ, ಮೆಲ್ರೀಡಾ ರೊಡ್ರೀಗಸ್ ಹಾಗೂ ಕಾರ್ಯದರ್ಶಿ ಸಿಂತಿಯಾ ಡಿಮೆಲ್ಲೊಉಪಸ್ಥಿತರಿದ್ದರು.
ವಾಳೆಯ ಗುರಿಕಾರರಾದ ಡಾ. ಫ್ರೀಡಾ ರೊಡ್ರೀಗಸ್* ವಂದಿಸಿದರು. ರೆನಿಶಾ ರೊಡ್ರೀಗಸ್ ಹಾಗೂ ಮೆಲಿಶಾ ರೊಡ್ರೀಗಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಸರ್ವಧರ್ಮೀಯರ ಸಹಭಾಗಿತ್ವದೊಂದಿಗೆ ನಡೆದ ಈ ಮೊಂತಿ ಹಬ್ಬವು ಬಳಕುಂಜೆಯ ಸೌಹಾರ್ದ, ಸಹಬಾಳ್ವೆ ಮತ್ತು ಏಕತೆಯ ಸಂದೇಶವನ್ನು ಮತ್ತಷ್ಟು ಗಟ್ಟಿಗೊಳಿಸಿತು.