ಮಂಗಳೂರು, ಸೆ.10 (DaijiworldNews/AA): ಲೋಕಾಯುಕ್ತ ಕೇಂದ್ರ ಕಛೇರಿಯಲ್ಲಿ ದಾಖಲಾಗಿರುವ ಸುಮೋಟೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 10 ರಂದು ಸುಳ್ಯ ತಾಲೂಕಿನ 7 ಗ್ರಾಮ ಪಂಚಾಯತ್ ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸುಳ್ಯ ತಾಲೂಕಿನ ಬೆಳ್ಳಾರೆ, ಪಂಜ ಗ್ರಾಮ ಪಂಚಾಯತ್, ಉಳ್ಳಾಲ ತಾಲೂಕಿನ ತಲಪಾಡಿ, ಕೊಣಾಜೆ, ಬಾಳೆಪುಣಿ ಗ್ರಾಮ ಪಂಚಾಯತ್, ಮಂಗಳೂರು ತಾಲೂಕಿನ ಬಾಳ ಗ್ರಾಮ ಪಂಚಾಯತ್, ಮೂಡಬಿದ್ರೆ ತಾಲೂಕಿನ ಬೆಳುವಾಯಿ ಗ್ರಾಮ ಪಂಚಾಯತ್ ಸೇರಿ ಒಟ್ಟು 7 ಗ್ರಾಮ ಪಂಚಾಯತ್ ಗಳ ಮೇಲೆ ದಾಳಿ ನಡೆಸಲಾಗಿದೆ. ಇನ್ನು ಗ್ರಾಮ ಪಂಚಾಯತ್ ನಲ್ಲಿನ ನ್ಯೂನ್ಯತೆಯ ಬಗ್ಗೆ ಲೋಕಾಯುಕ್ತ ಕೇಂದ್ರ ಕಛೇರಿಗೆ ವರದಿ ಸಲ್ಲಿಸಲಾಗುವುದು.
ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರಾದ ಬಿ.ಪಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಘಟಕದ ಪೊಲೀಸ್ ಉಪಾಧಿಕ್ಷಕರಾದ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಕಾರವಾರ ಲೋಕಾಯುಕ್ತ ಘಟಕದ ಪೊಲೀಸ್ ಉಪಾಧೀಕ್ಷಕರಾದ ಧನ್ಯ ನಾಯಕ್, ಪೊಲೀಸ್ ನಿರೀಕ್ಷಕರಾದ ರವಿ ಎನ್ ಎನ್, ಉಡುಪಿ ಲೋಕಾಯುಕ್ತ ಘಟಕದ ಪೊಲೀಸ್ ಉಪಾಧೀಕ್ಷಕರಾದ ಹಾಲ ಮೂರ್ತಿ ರಾವ್ ವಿ. ಎಸ್, ಪೊಲೀಸ್ ನಿರೀಕ್ಷಕರಾದ ಮಂಜುನಾಥ ರವರು ಸಿಬ್ಬಂದಿಯವರೊಂದಿಗೆ ಗ್ರಾಮ ಪಂಚಾಯತ್ ಮೇಲೆ ದಾಳಿ ನಡೆಸಲಾಯಿತು.