ಮಂಗಳೂರು, ಸೆ. 11 (DaijiworldNews/TA): ವಿಶ್ವ ಹೃದಯ ದಿನದ ಅಂಗವಾಗಿ ಪಂಪ್ವೆಲ್ನ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆ ವಿಶೇಷ ರಿಯಾಯಿತಿ ದರದಲ್ಲಿ ಸಮಗ್ರ ಹೃದಯ ತಪಾಸಣೆ ಪ್ಯಾಕೇಜ್ ಘೋಷಿಸಿದೆ.

‘ಸಮಯವು ಅಮೂಲ್ಯವಾದುದು, ಪ್ರತಿ ಹೃದಯ ಬಡಿತವೂ ಅಷ್ಟೇ ಅಮೂಲ್ಯ - ನಿಮ್ಮ ಹೃದಯವನ್ನು ತಿಳಿದುಕೊಳ್ಳಿ, ನಿಮ್ಮ ಭವಿಷ್ಯವನ್ನು ರಕ್ಷಿಸಿ’ ಎಂಬ ಸಂದೇಶದೊಂದಿಗೆ ಈ ವಿಶೇಷ ಆರೋಗ್ಯ ಉಪಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೃದಯರಕ್ತನಾಳದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಹೃದಯ ಸಂಬಂಧಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಇದರ ಉದ್ದೇಶವಾಗಿದೆ. ಸಾಮಾನ್ಯವಾಗಿ ರೂ. 3,000 ವೆಚ್ಚವಾಗುವ ಈ ಸಮಗ್ರ ಹೃದಯ ತಪಾಸಣೆ ಪ್ಯಾಕೇಜ್ ಇದೀಗ ರೂ.1,499 ರಿಯಾಯಿತಿ ದರದಲ್ಲಿ ಲಭ್ಯವಿದೆ.
ಪ್ಯಾಕೇಜ್ನಲ್ಲಿ ಏನೇನಿದೆ? : ವೈದ್ಯರ ಸಲಹೆಯ ಆಧಾರದ ಮೇಲೆ ECHO ಅಥವಾ ಟ್ರೆಡ್ಮಿಲ್ ಟೆಸ್ಟ್ (TMT)ಲಿಪಿಡ್ ಪ್ರೊಫೈಲ್, ಕ್ರಿಯೇಟಿನೈನ್ ಪರೀಕ್ಷೆ, ರ್ಯಾಂಡಮ್ ಬ್ಲಡ್ ಶುಗರ್ (RBS), ECG, ಆಹಾರ ಸಲಹೆ ಹಾಗೂ ಹೃದ್ರೋಗ ತಜ್ಞರ ಸಮಾಲೋಚನೆ ಪ್ಯಾಕೇಜ್ನಲ್ಲಿ ಒಳಗೊಂಡಿದೆ ಈ ವಿಶೇಷ ಕೊಡುಗೆ ಸೆಪ್ಟೆಂಬರ್ 15ರಿಂದ ಸೆಪ್ಟೆಂಬರ್ 30, 2026ರವರೆಗೆ ಮಾತ್ರ ಲಭ್ಯವಿರಲಿದೆ. ತಪಾಸಣೆಗೆ ಪೂರ್ವ ಅಪಾಯಿಂಟ್ಮೆಂಟ್ ಕಡ್ಡಾಯವಾಗಿದ್ದು, ಹೃದ್ರೋಗ ತಜ್ಞರ ಸಮಾಲೋಚನೆಗೆ ಕೆಲವು ಷರತ್ತುಗಳು ಅನ್ವಯವಾಗಲಿವೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ.
ಆಸಕ್ತರು 7259016560 ಸಂಖ್ಯೆಗೆ ಕರೆ ಮಾಡಿ ಅಪಾಯಿಂಟ್ಮೆಂಟ್ ಬುಕ್ ಮಾಡಬಹುದು. ಪಂಪ್ವೆಲ್ನ ಮಹಾವೀರ ವೃತ್ತದಲ್ಲಿರುವ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 0824 2880 880 ಸಂಖ್ಯೆಗೆ ಕರೆ ಮಾಡಬಹುದು ಅಥವಾ [www.indianahospital.in](http://www.indianahospital.in) ವೆಬ್ಸೈಟ್ಗೆ ಭೇಟಿ ನೀಡಬಹುದು.