ಉಡುಪಿ,ಸೆ. 12 (DaijiworldNews/AK): ಉಡುಪಿ-ಮಂಗಳೂರು ಹೆದ್ದಾರಿಯ ಕಟಪಾಡಿಯ ಅಂಡರ್ಪಾಸ್ ಬಳಿ ಮೀನು ತುಂಬಿದ ಲಾರಿಯೊಂದು ಶನಿವಾರ ಮುಂಜಾನೆ ಪಲ್ಟಿಯಾಗಿದೆ.


ಉಡುಪಿಯಿಂದ ಮಂಗಳೂರು ಕಡೆಗೆ ಲಾರಿ ಪ್ರಯಾಣಿಸುತ್ತಿದ್ದಾಗ ಕಟಪಾಡಿ ಅಂಡರ್ಪಾಸ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸ್ಥಳದಲ್ಲಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮೀನಿನ ಲಾರಿಯ ಚಾಲಕನು ಕಟಪಾಡಿ ಅಂಡರ್ಪಾಸ್ ಬಳಿ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಅಳವಡಿಸಲಾಗಿದ್ದ ಸೂಚನಾ ಫಲಕವನ್ನು ಗಮನಿಸದೇ ನೇರವಾಗಿ ಕಾಮಗಾರಿ ಪ್ರದೇಶಕ್ಕೆ ನುಗ್ಗಿದ್ದಾನೆ . ಅಂಡರ್ಪಾಸ್ ಕಾಮಗಾರಿ ಪ್ರದೇಶದ ಬಳಿ ಸಾರ್ವಜನಿಕ ಸಂಚಾರಕ್ಕೆ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಲಾರಿ ಚಾಲಕ ಪರ್ಯಾಯ ಮಾರ್ಗ ಬಳಸದೆ ಮುನ್ನುಗ್ಗಿದ್ದರಿಂದ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ