ಮಂಗಳೂರು, ಸೆ. 12 (DaijiworldNews/AK): ಭೀಮಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕಳೆದ ಜುಲೈ 9 ರಿಂದ ಆಗಸ್ಟ್ 9 ರ ತನಕ 'ಭೀಮಾ ಬ್ರಿಲಿಯೆನ್ಸ್' ಎಂಬ ವಿಶೇಷ ಡೈಮಂಡ್ ಆಫರ್ ಇಡಲಾಗಿತ್ತು. ಇದರ ಸಲುವಾಗಿ ಬೇರೆ ಬೇರೆ ರೀತಿಯಲ್ಲಿ ವಿಶೇಷ ರಿಯಾಯಿತಿಗಳನ್ನು ನೀಡಲಾಗಿತ್ತು. ಇದರಲ್ಲಿ ಬಂಪರ್ ಬಹುಮಾನವಾಗಿ BMW X10' ಕಾರನ್ನು ಕೊಡುಗೆಯಾಗಿ ನೀಡಲಾಗಿತ್ತು.






ಇದರ ಡ್ರಾ ಕಾರ್ಯಕ್ರಮವು ಆಗಸ್ಟ್ 17 ರಂದು ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿತ್ತು. ಅದರಲ್ಲಿ 21 ಶಾಖೆಯ ಲಕ್ಕಿ ಕೂಪನ್ ಅನ್ನು ಹಾಕಿ ಡ್ರಾ ಮಾಡಲಾಯಿತು. ಅದರಲ್ಲಿ ಉಡುಪಿಯ ಶಂಕರನಾರಾಯಣ ಕ್ಯಾಶ್ಯೂ ಇಂಡಸ್ಟ್ರೀಸ್ ನ ಶಶಿ ಶೆಟ್ಟಿ ಅವರು ವಿಜೇತರಾಗಿದ್ದರು. ಅವರಿಗೆ ಮಂಗಳೂರಿನ ಭೀಮಾ ಜ್ಯುವೆಲ್ಲರ್ಸ್ ನ ಕಚೇರಿಯಲ್ಲಿಂದು ನಡೆದ ಕೀ ಹಸ್ತಾಂತರ ಕಾರ್ಯಕ್ರಮದಲ್ಲಿ ಬಿಎಂಡಬ್ಲ್ಯು ಕಾರನ್ನು ಹಸ್ತಾಂತರಿಸಲಾಯಿತು,
ಇದೇ ವೇಳೆ ಇವರ ಕುಟುಂಬಸ್ಥರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಮಹೇಶ್ ರಾಜ್, ಕಾರ್ತಿಕ್ ರಾವ್, ಮಂಗಳೂರು ಶೋರೂಂ ನ ಡೆಪ್ಯೂಟಿ ಮ್ಯಾನೇಜರ್ ಸತೀಶ್, ಜಿ. ರಾಘವೇಂದ್ರ ಭಟ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.