ಬಂಟ್ವಾಳ ಡಿ 31: ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನ ನೂತನ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್,ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಬೆಳ್ತಂಗಡಿ ,ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,,ಎಂಎಸ್.ಮಹಮ್ಮದ್,ಸಾಹುಲ್ ಹಮೀದ್ ,ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್,ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ,ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ,ಬ್ಮಾಕ್ ಅಧ್ಯಕ್ಷರಾದ ಅಬ್ಬಾಸ್ ಆಲಿ,ಮಾಯಿಲಪ್ಪ ಸಾಲ್ಯಾನ್,ಬಂಟ್ವಾಳ ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್ ,ಮಹಿಳಾ ಕಾಂಗ್ರಸ್ ಅಧ್ಯಕ್ಷೆ ಯರಾದ ಮಲ್ಲಿಕಾ ಶೆಟ್ಟಿ,ಜಯಂತಿ ಪೂಜಾರಿ ಮೊದಲಾದವರಿದ್ದರು.
ಅಶ್ವನಿ ಗೈರು - ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅಶ್ವನಿ ಕುಮಾರ್ ರೈ ಅವರ ಗೈರು ಹಾಜರಾತಿ ಗಮನ ಸೆಳೆಯಿತು. ಸಚಿವ ರೈ,ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸಹಿತ ಪಕ್ಷದ ಪ್ರಮುಖರು ಅಶ್ವನಿ ಕುಮಾರ್ ಅವರನ್ನು ಕಟ್ಟಡದ ಉದ್ಘಾಟನೆಗೆ ಆಹ್ವಾನಿಸಿದ್ದರೂ ಅವರು ಮಾತ್ರ ಕಟ್ಟಡ ಉದ್ಘಾಟನಾ ಕಾರ್ಯದಲ್ಲಿ ಭಾಗವಹಿಸಲಿಲ್ಲ.ಪಕ್ಷದ ಸ್ಥಳೀಯ ಮುಖಂಡರು ಕಳೆದ ಆರು ವರ್ಷಗಳಿಂದ ಅಶ್ವನಿಕುಮಾರ್ ಅವರನ್ನು ನಡೆಸಿಕೊಂಡ ರೀತಿಯಿಂದ ಅಸಮಾಧಾನಿತರಾಗಿರುವ ಹಿನ್ನಲೆಯಲ್ಲಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎನ್ನಲಾಗಿದೆ.ಕಟ್ಟಡ ನಿರ್ಮಾಣಗೊಂಡ ಬಳಿಕ ಅವರು ಅದರ ಕೀ ಹಾಗೂ ದಾಖಲೆ ಪತ್ರವನ್ನು ಕೆಪಿಸಿಸಿಗೆ ಹಸ್ತಾಂತರಿಸಿದ್ದರು.