ಕಾಸರಗೋಡು, ಅ.08 (DaijiworldNews/TA) : ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತಗಾರರಾಗಿ 25 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಉದುಮ ಮಂಡಲ ಸಮಿತಿಯ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು.

ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್ ಉದ್ಘಾಟಿಸಿದರು. ಸಮಾಜಸೇವೆಯ ಭಾಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಹಲವು ಕಾರ್ಯಕರ್ತರು ಭಾಗವಹಿಸಿ ರಕ್ತದಾನ ಮಾಡಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸೌಮ್ಯ ಪದ್ಮನಾಭನ್ ಹಾಗೂ ವಿನಿಲ್ ಕುಮಾರ್, ಮಂಡಲ ಉಪಾಧ್ಯಕ್ಷೆ ಗೀತಾ ಕುಮಾರನ್, ಮಂಡಲ ಕಾರ್ಯದರ್ಶಿಗಳಾದ ಶೋಭಾ ತಯಲ್ತೊಡಿ, ಶ್ರೀಜ ವಿನೋದ್, ಶ್ಯಾಮ್ ಪ್ರಸಾದ್ ಹಾಗೂ ಮಧುಸೂದನನ್, ಮಂಡಲ ಖಜಾಂಚಿ ರತೀಶ್ ಮತ್ತು ಚೆಮ್ಮನಾಡ್ ಈಸ್ಟ್ ಏರಿಯಾ ಅಧ್ಯಕ್ಷ ಪ್ರಸಾದ್ ತೈರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸೇವೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಆದ್ಯತೆ ನೀಡಿ ಜನೋಪಯೋಗಿ ವಿವಿಧ ಕಾರ್ಯಕ್ರಮಗಳನ್ನು ಮುಂದುವರಿಸುವ ಉದ್ದೇಶದಿಂದ ‘ಸೇವಾ ಸಂಕಲ್ಪ ಅಭಿಯಾನ’ವನ್ನು ಮುಂದುವರಿಸಲಾಗುವುದು ಎಂದು ಬಿಜೆಪಿ ಮುಖಂಡರು ತಿಳಿಸಿದರು.