ಮಂಗಳೂರು,ಅ.08 (DaijiworldNews/AK) : ಅಪರೂಪದ ಹಾಗೂ ಅತ್ಯಂತ ಸಂಕೀರ್ಣವಾದ ಅವಳಿ ಗರ್ಭಧಾರಣೆಯ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಇಂಡಿಯಾನಾ ಆಸ್ಪತ್ರೆಯ ಬಹುವಿಭಾಗೀಯ ವೈದ್ಯಕೀಯ ತಂಡವು ತನ್ನ ವೈದ್ಯಕೀಯ ಪರಿಣತಿ, ನಿಖರ ಶಸ್ತ್ರಚಿಕಿತ್ಸಾ ಕೌಶಲ್ಯ ಮತ್ತು ಸಮನ್ವಯಿತ ತಂಡದ ಕಾರ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

42 ವರ್ಷದ ಪ್ರಥಮ ಗರ್ಭಿಣಿಯೊಬ್ಬರು IVF ಮೂಲಕ ಅವಳಿ ಗರ್ಭಧಾರಣೆಯಾಗಿದ್ದು, Placenta Percreta ಎಂಬ ಅತ್ಯಂತ ಗಂಭೀರ ತೊಂದರೆಯಿಂದ ಬಳಲುತ್ತಿದ್ದರು. ಜರಾಯು (Placenta) ಗುದನಾಳದ (Rectum) ಒಳಭಾಗಕ್ಕೆ ಆಳವಾಗಿ ಪ್ರವೇಶಿಸಿದ್ದರಿಂದ ತೀವ್ರ ರಕ್ತಸ್ರಾವ ಉಂಟಾಗಿತ್ತು.
ಡಾ. ಅಶ್ವಿನಿ ವಿಶ್ವನಾಥ್, ಕನ್ಸಲ್ಟೆಂಟ್ ಗೈನಕಾಲಜಿಸ್ಟ್ ಅವರ ಮಾರ್ಗದರ್ಶನದಲ್ಲಿ ರೋಗಿಯನ್ನು ದಾಖಲಿಸಿಕೊಂಡು, ಅತ್ಯಂತ ಎಚ್ಚರಿಕೆಯಿಂದ ಬಹುಶಿಸ್ತೀಯ ಚಿಕಿತ್ಸಾ ಯೋಜನೆಯನ್ನು ರೂಪಿಸಲಾಯಿತು. ಚಿಕಿತ್ಸಾ ತಂಡದಲ್ಲಿ ಡಾ. ನಿಹಾಲ್ ಅಲಿ, ಗ್ಯಾಸ್ಟ್ರೋಎಂಟರಾಲಜಿಸ್ಟ್; ಡಾ. ಭಾವನಾ ಶೆರಿಗಾರ್, ಸೀನಿಯರ್ ಕನ್ಸಲ್ಟೆಂಟ್ OBG; ಡಾ. ಕಾರ್ತಿಕ್ ವೇಲ್ಮುರುಗನ್, ಕನ್ಸಲ್ಟೆಂಟ್ ಸರ್ಜಿಕಲ್ ಆಂಕಾಲಜಿಸ್ಟ್; ಡಾ. ನವೀನ್ ಪಿ. ಗೋಪಾಲ್, ಕನ್ಸಲ್ಟೆಂಟ್ ಜನರಲ್ ಮತ್ತು ಲ್ಯಾಪರೋಸ್ಕೋಪಿಕ್ ಸರ್ಜನ್; ಹಾಗೂ ಡಾ. ಪ್ರತೀಕ್ ವಾಸ್ವಾನಿ, ಕನ್ಸಲ್ಟೆಂಟ್ ಮತ್ತು ಮುಖ್ಯಸ್ಥರು, CTVS ವಿಭಾಗ, ಭಾಗವಹಿಸಿದ್ದರು.
ತಂಡದ ಸಮನ್ವಯ, ಪರಿಣತಿ ಮತ್ತು ನಿಖರ ಶಸ್ತ್ರಚಿಕಿತ್ಸಾ ನಿರ್ವಹಣೆಯ ಫಲವಾಗಿ Lower Segment Caesarean Section (LSCS) ಯಶಸ್ವಿಯಾಗಿ ನಡೆಸಿ, ನಂತರ Hysterectomy ಹಾಗೂ Bowel Resection ಮಾಡಲಾಯಿತು.
ಅತ್ಯಂತ ಸಂಕೀರ್ಣ ಮತ್ತು ಜೀವಕ್ಕೆ ಅಪಾಯಕಾರಿಯಾದ ಈ ಪ್ರಕರಣವನ್ನು ಬಹುಶಿಸ್ತೀಯ ವೈದ್ಯಕೀಯ ತಂಡದ ಸಮನ್ವಯದ ಮೂಲಕ ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, ತಾಯಿ ಮತ್ತು ಅವಳಿ ಶಿಶುಗಳ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ತಂಡದ ಪರಿಣತಿ ಮತ್ತು ಸಮಯೋಚಿತ ನಿರ್ಧಾರಗಳು ಪ್ರಮುಖ ಪಾತ್ರ ವಹಿಸಿವೆ.