ಬಂಟ್ವಾಳ ಜ 2: ಹಿಂದೂ ಜಾಗರಣಾ ವೇದಿಕೆ ಅಮ್ಟಾಡಿ ವಲಯ ಮತ್ತು ಹಿಂದೂ ಜಾಗರಣಾ ವೇದಿಕೆ ಮಹಿಳಾ ಘಟಕ ಅಮ್ಟಾಡಿ ಇವರ ನೇತೃತ್ವದಲ್ಲಿ, ಹಿಂದು ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಮೇಲಿನ ಗಡೀಪಾರು ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಒಂದು ವಾರಗಳ ಕಾಲ ನಿರಂತರ ನಡೆಯುವ ಪ್ರತಿಭಟನೆಗೆ ಜ 2 ರ ಮಂಗಳವಾರ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಆಗಮಿಸಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ದುರುದ್ದೇಶದಿಂದ ಹಿಂದೂ ಕಾರ್ಯಕರ್ತರ ಮೇಲೆ ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಾಖಲಿಸುವುದು ಗಡಿಪಾರುಗಳಂತಹ ಅದೇಶಗಳನ್ನು ಮಾಡುವ ಕೆಲಸಗಳು ಆಗುತ್ತಿರುವುದು ದುರದೃಷ್ಟಕರ, ಹಿಂದೂಗಳನ್ನು ಈ ಮೂಲಕ ದಮನಿಸುವ ಕೆಲಸಗಳು ಆಗುತ್ತಿವೆ. ದ್ವೇಷದ ರಾಜಕೀಯ ಉತ್ತಮ ಬೆಳವಣಿಗೆಯಲ್ಲ ಎಂದು ಅವರು ಹೇಳಿದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಮಾತನಾಡಿ ಸಿ.ಎಂ.ಸಿದ್ದರಾಮಯ್ಯ ಸರಕಾರದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ಪ್ರಕರಣ ದಾಖಲಿಸಿ ಮಾನಸಿಕ ಹಿಂಸೆ ಕೊಡುವ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಸುಲೋಚನಾ ಜಿ.ಕೆ ಭಟ್ ವಿಹಿಂಪ ಮುಖಂಡ ಅಶೋಕ ಶೆಟ್ಟಿ ಸರಪಾಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಮುಖರಾದ ರವಿರಾಜ್ ಬಿ.ಸಿ.ರೋಡ್, ಚಂದ್ರಕುಮಾರ್, ಅರುಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಕೆಂಪುಗುಡ್ಡೆ, ರಾಮ್ ದಾಸ್ ಬಂಟ್ವಾಳ, ವಿಠಲ ಅಲ್ಲಿಪಾದೆ, ಮಚ್ಚೇಂದ್ರ ಸಾಲಿಯಾನ್, ಬಾಲಕೃಷ್ಣ ಕಲಾಯಿ, ಗುರುರಾಜ್ ಬಂಟ್ವಾಳ, ಶೇಖರ ಶೆಟ್ಟಿ, ಬಬಿತಾ ಕೋಟ್ಯಾನ್, ಸತೀಶ್ ಶೆಟ್ಟಿ, ಜಗದೀಶ್ ಕಾಮಾಜೆ, ದೇವದಾಸ ಶೆಟ್ಟಿ, ಹರೀಶ್ ಶೆಟ್ಟಿ ಪಡು, ಹರೀಶ್ ಕಲಾಯಿ ಮತ್ತಿತತರು ಉಪಸ್ಥಿತರಿದ್ದರು.