ಮಂಗಳೂರು, ಅ.10 (DaijiworldNews/AK):ಪಿಲಿಕುಳದ ಮಾನಸಾ ವಾಟರ್ ಪಾರ್ಕ್ & ರೆಸಾರ್ಟ್ ವತಿಯಿಂದ ಪ್ರವಾಸಿಗರಿಗೆ ವಿಶೇಷ ಪ್ರೋತ್ಸಾಹಕ ಕೊಡುಗೆಯನ್ನು ಘೋಷಿಸಲಾಗಿದೆ. “ಇಂದು ಭೇಟಿ ನೀಡಿ, ನಾಳೆ ದೊಡ್ಡ ಉಳಿತಾಯ ಮಾಡಿ!” ಎಂಬ ಆಕರ್ಷಕ ಘೋಷವಾಕ್ಯದೊಂದಿಗೆ, ಗ್ರಾಹಕರು ತಮ್ಮ ಮುಂದಿನ ಭೇಟಿಯಲ್ಲಿ ಶೇ. 30ರವರೆಗೆ ರಿಯಾಯಿತಿ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.


ಈ ಕೊಡುಗೆಯಡಿ, 2026ರ ಅಕ್ಟೋಬರ್ 10ರಿಂದ ಡಿಸೆಂಬರ್ 31ರವರೆಗೆ ಮಾನ್ಯವಾದ ವಯಸ್ಕರ 600 ರೂ. ಪ್ರವೇಶ ಟಿಕೆಟ್ ಖರೀದಿಸುವ ಗ್ರಾಹಕರಿಗೆ ಮುಂದಿನ ಭೇಟಿಗಾಗಿ ಶೇ. 30ರ ರಿಯಾಯಿತಿ ವೋಚರ್ ನೀಡಲಾಗುತ್ತದೆ. ಈ ವೋಚರ್ ಅನ್ನು 2027ರ ಜನವರಿ 1ರಿಂದ ಫೆಬ್ರವರಿ 28ರವರೆಗೆ ಬಳಸಬಹುದಾಗಿದೆ. ಪ್ರತಿ ವೋಚರ್ಗೆ ಗರಿಷ್ಠ 1,000 ರೂ. ರಿಯಾಯಿತಿ ಅನ್ವಯವಾಗುತ್ತದೆ. ವೋಚರ್ ಅನ್ನು ಟಿಕೆಟ್ ಕೌಂಟರ್ನಲ್ಲಿ ಸಲ್ಲಿಸುವುದು ಕಡ್ಡಾಯವಾಗಿದ್ದು, ಒಮ್ಮೆ ಮಾತ್ರ ಬಳಸಲು ಅವಕಾಶವಿದೆ.
ಇತರ ರಿಯಾಯಿತಿಗಳು, ಕೊಡುಗೆಗಳು ಅಥವಾ ವಿಶೇಷ ಪ್ಯಾಕೇಜ್ಗಳೊಂದಿಗೆ ಈ ಕೊಡುಗೆಯನ್ನು ಸಂಯೋಜಿಸಲಾಗುವುದಿಲ್ಲ.
ಕುಟುಂಬಗಳು, ಸ್ನೇಹಿತರು ಹಾಗೂ ಪ್ರವಾಸಿಗರು ಮಾನಸಾ ವಾಟರ್ ಪಾರ್ಕ್ಗೆ ಭೇಟಿ ನೀಡಿ ಜಲಕ್ರೀಡೆ ಮತ್ತು ಮನರಂಜನೆಯ ಸವಿಯನ್ನು ಸವಿಯುವುದರ ಜೊತೆಗೆ, ಮುಂದಿನ ಭೇಟಿಗೆ ವಿಶೇಷ ಉಳಿತಾಯವನ್ನು ಪಡೆಯಬಹುದು ಎಂದು ಸಂಸ್ಥೆಯು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ:
ಮಾನಸಾ ವಾಟರ್ ಪಾರ್ಕ್ & ರೆಸಾರ್ಟ್,
ಪಿಲಿಕುಳ ನಿಸರ್ಗಧಾಮ, ವಾಮಂಜೂರು, ಮಂಗಳೂರು.
ಮೊಬೈಲ್: 70220 24365
ವೆಬ್ಸೈಟ್: www.manasawaterpark.com