ಕುಂದಾಪುರ, ಅ.12 (DaijiworldNews/AA): ಸ್ಕೂಟಿ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ದಾಯ್ಜಿವರ್ಡ್ ಸ್ಟಾರ್ ಸಿಂಗರ್ ಖ್ಯಾತಿಯ ಸ್ಯಾಮ್ಯುಯೆಲ್ ಲೂವಿಸ್ ಅವರ ತಂದೆ ಅಜಿತ್ ಲೂವಿಸ್ ಅವರು ಸಾವನ್ನಪ್ಪಿದ ಘಟನೆ ಸೋಮವಾರ ಅರಾಟೆ ಸೇತುವೆ ಬಳಿ ಸಂಭವಿಸಿದೆ.




ಕುಂದಾಪುರದ ಜೆಎಲ್ಬಿ ರಸ್ತೆಯ ನಿವಾಸಿ ಅಜಿತ್ ಲೂವಿಸ್ ಅವರು ತಮ್ಮ ಸ್ಕೂಟರ್ನಲ್ಲಿತ್ರಾಸಿಯತ್ತ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ಎಚ್ಎಂ ಆಂಬುಲೆನ್ಸ್ ಸೇವೆಯ ಇಬ್ರಾಹಿಂ ಗಂಗೊಳ್ಳಿ ಮತ್ತು ಅಬ್ರಾರ್ ಸಹಾಯ ಮಾಡಿದರು.
ಲಭ್ಯವಿರುವ ಮಾಹಿತಿಯ ಪ್ರಕಾರ, ಅರಾಟೆ ಸೇತುವೆಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಈ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.
ಅಜಿತ್ ಲೂವಿಸ್ ಅವರು 1990 ರ ದಶಕದಲ್ಲಿ ತಮ್ಮ ಸ್ನೇಹಿತ ಸತೀಶ್ ಖಾರ್ವಿ ಅವರೊಂದಿಗೆ ಕುಂದಾಪುರದಲ್ಲಿ ಜನಪ್ರಿಯ ಗ್ರಾಫಿಕ್ಸ್ ಸಂಸ್ಥೆಯಾದ 'ಸ್ಯಾನ್ಜೋಸ್ ಡೇಟಾ ಸಿಸ್ಟಮ್ಸ್' ಅನ್ನು ಸ್ಥಾಪಿಸಿದ್ದರು. ನಂತರ ಅವರು ಗಲ್ಫ್ ದೇಶಗಳಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದರು ಮತ್ತು ಇತ್ತೀಚೆಗೆ ದೆಹಲಿಯಲ್ಲಿ ಉದ್ಯೋಗದಲ್ಲಿದ್ದರು. ಅವರು ಕೇವಲ ಎರಡು ದಿನಗಳ ಹಿಂದಷ್ಟೇ ತಮ್ಮ ಸ್ವಗ್ರಾಮಕ್ಕೆ ಹಿಂತಿರುಗಿದ್ದರು.
ಮೃತರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.