ಮಂಗಳೂರು, ಅ.12 (DaijiworldNews/AK): ವಿ.ಕೆ. ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ನ ಯೆಯ್ಯಾಡಿ, ಕಲ್ಲಾಪು ತೊಕ್ಕೊಟ್ಟು, ವಾಮಂಜೂರು, ವಿ.ಕೆ. ಲಿವಿಂಗ್ ಕಾನ್ಸೆಪ್ಟ್ನ ಲೇಡಿಹಿಲ್ ಹಾಗೂ ಉಡುಪಿಯ ಕಡಿಯಾಳಿ ಶೋರೂಮ್ಗಳಲ್ಲಿ ‘ವಿ.ಕೆ. ಉತ್ಸವ್ 2026’ ಭಾನುವಾರದಂದು ಆರಂಭಗೊಂಡಿದೆ. ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಶೇಕಡಾ 50% ವರೆಗಿನ ದರಕಡಿತದೊಂದಿಗೆ ಆಕರ್ಷಕ ಕೊಡುಗೆಗಳನ್ನು ಗ್ರಾಹಕರಿಗಾಗಿ ಒದಗಿಸಲಾಗಿದೆ.

ವಿ.ಕೆ. ಉತ್ಸವ್ 2026 ರ ಉದ್ಘಾಟನಾ ಸಮಾರಂಭವನ್ನು ಮಂಗಳೂರಿನ ಯೆಯ್ಯಾಡಿ ಷೋರೂಮ್ ನಲ್ಲಿ ಆಯೋಜಿಸಲಾಗಿತ್ತು. ಸಂಸ್ಥೆಯ ಮುಖ್ಯಸ್ಥರಾದ ವಿಟ್ಟಲ್ ಕುಲಾಲ್ ಅವರು ದೀಪ ಬೆಳಗಿಸುವುದರೊಂದಿಗೆ ‘ವಿ.ಕೆ. ಉತ್ಸವ್ 2026 ಕ್ಕೆ ಚಾಲನೆ ನೀಡಿದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ವಿನುತಾ ವಿಟ್ಟಲ್ ಕುಲಾಲ್ ಅವರು ಉಪಸ್ಥಿತರಿದ್ದರು. ಎಚ್ ಆರ್ ಮ್ಯಾನೇಜರ್ ನಿಶಾಂತ್, ಬ್ರಾಂಚ್ ಸೀನಿಯರ್ ಮ್ಯಾನೇಜರ್ ತಿಲಕ್ ರಾಜ್, ಮ್ಯಾನೇಜರ್ ರಾಕೇಶ್, ಸೇಲ್ಸ್ ಮ್ಯಾನೇಜರ್ ಮಲ್ಲಿಕಾ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ನಿಶಾಂತ್ ರಾಜ್ ಕಾರ್ಯಕ್ರಮ ನಿರೂಪಿಸಿ ವಿ ಕೆ ಉತ್ಸವದ ಕುರಿತು ಮಾಹಿತಿ ನೀಡಿದರು.
ಗ್ರಾಹಕರ ಶಾಪಿಂಗ್ ಅನುಭವವನ್ನು ಇನ್ನಷ್ಟು ವಿಶೇಷವಾಗಿಸುವ ಉದ್ದೇಶದಿಂದ ವಿಕೆ ಉತ್ಸವ್ 2026ರ ಅಂಗವಾಗಿ ಗ್ರಾಹಕರಿಗೆ ಪ್ರತಿ ಶಾಪಿಂಗ್ ಮೇಲೆ ಶಾಪ್ & ವಿನ್ ಅವಕಾಶವನ್ನು ನೀಡಲಾಗುತ್ತಿದ್ದು, ಅದೃಷ್ಟಶಾಲಿ ಗ್ರಾಹಕರಿಗೆ ಹಲವು ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಬಂಪರ್ ಬಹುಮಾನವಾಗಿ ಸುಜುಕಿ ಬಲೆನೊ ಕಾರು, ಮೊದಲ ಮತ್ತು ಎರಡನೇ ಬಹುಮಾನವಾಗಿ ಆಂಪಿಯರ್ ಮ್ಯಾಗ್ನಸ್ ಗ್ರಾಂಡ್ ಸ್ಕೂಟರ್ಗಳು, ಮೂರನೇ ಬಹುಮಾನವಾಗಿ ಚಿನ್ನದ ನೆಕ್ಲೆಸ್ ಹಾಗೂ ಇತರೆ ಆಕರ್ಷಕ ಬಹುಮಾನಗಳಾದ ಬೆಡ್ರೂಮ್ ಸೆಟ್, ಎಲ್-ಕಾರ್ನರ್ ಸೋಫಾ ಸೆಟ್, ಡೈನಿಂಗ್ ಟೇಬಲ್, ಡಬಲ್ ಡೋರ್ ರೆಫ್ರಿಜರೇಟರ್, 43 ಇಂಚಿನ ಟಿವಿ ಮತ್ತು 5 ಗಿಫ್ಟ್ ವೌಚರ್ಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.
ಗ್ರಾಹಕರಿಗೆ ತಮಗಿಷ್ಟವಾದ ವಸ್ತುಗಳನ್ನು ಅತಿ ಕಡಿಮೆ ದರದಲ್ಲಿ ಖರೀದಿಸಲು ಅನುಕೂಲವಾಗುವಂತೆ ವಿಕೆ ಉತ್ಸವ್ನಲ್ಲಿ ವ್ಯಾಪಕ ಶ್ರೇಣಿಯ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಶೇಕಡಾ 50% ವರೆಗೆ ದರಕಡಿತ ಲಭ್ಯವಿದೆ. ಆಧುನಿಕ ಸೋಫಾ ಸೆಟ್, ಬೆಡ್ರೂಮ್ ಸೆಟ್, ಡೈನಿಂಗ್ ಸೆಟ್, ಟಿವಿ ಯೂನಿಟ್, ಕಿಚನ್ ಯೂನಿಟ್ , ಕ್ರಾಕರಿ ಯೂನಿಟ್, ಆಫೀಸ್ ಫರ್ನಿಚರ್, ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಹಾಗೂ ಕಿಚನ್ ಅಪ್ಲಯನ್ಸ್ಗಳ ವಿವಿಧ ವಿನ್ಯಾಸಗಳು ಮತ್ತು ಮಾದರಿಗಳು ಗ್ರಾಹಕರ ಆಯ್ಕೆಗೆ ಲಭ್ಯವಿವೆ.
ಮನೆ, ಕಚೇರಿ, ಶಾಲೆ-ಕಾಲೇಜು, ಮಸೀದಿ, ಚರ್ಚ್ ಹಾಗೂ ದೇವಾಲಯಗಳಿಗೆ ಅಗತ್ಯವಿರುವ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳಲ್ಲದೆ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ತಯಾರಿಸಿದ ಪೀಠೋಪಕರಣಗಳು ಇಲ್ಲಿ ಲಭ್ಯವಿದೆ. ಗ್ರಾಹಕರು ರೆಡಿ ಮೇಡ್ ವಸ್ತುಗಳನ್ನು ಖರೀದಿಸಲು ಇಲ್ಲಿ ವಿಫುಲ ಅವಕಾಶಗಳಿವೆ.
ಬಜಾಜ್ ಫೈನಾನ್ಸ್, ಎಚ್ಡಿಎಫ್ಸಿ, ಎಚ್ ಡಿ ಬಿ ಮತ್ತು ಐಡಿಎಫ್ಸಿ ಫೈನಾನ್ಸ್ ಸಹಾಯದಿಂದ ಯಾವುದೇ ಹಣ ಪಾವತಿಸದೇ ಸುಲಭ ಮಾಸಿಕ ಕಂತುಗಳ ಮೂಲಕ ತಮ್ಮ ನೆಚ್ಚಿನ ಉತ್ಪನ್ನಗಳನ್ನು ಖರೀದಿಸುವ ಸೌಲಭ್ಯವೂ ಲಭ್ಯವಿದೆ.
ಸ್ಯಾಮ್ ಸ್ಯಾಂಗ್, ಎಲ್ಜಿ, ಪ್ಯಾನಸೋನಿಕ್, ಸೋನಿ, ಹೈಯರ್, ವರ್ಲ್ಪೂಲ್ , ಬಾಷ್, ಐಎಫ್ ಬಿ ಗೋದ್ರೆಜ್, ಓ’ಜನರಲ್, ಲೋಯ್ಡ್, ಹ್ಯಾವೆಲ್ಸ್, ಡೈಕಿನ್, ವಿಗಾರ್ಡ್ ಸೇರಿದಂತೆ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್ಗಳ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಇಲ್ಲಿ ಲಭ್ಯವಿವೆ.
ಟಿವಿ, ರೆಫ್ರಿಜರೇಟರ್, ಏರ್ ಕಂಡಿಷನರ್, ವಾಷಿಂಗ್ ಮೆಷಿನ್, ವಾಟರ್ ಹೀಟರ್, ವಾಟರ್ ಪ್ಯೂರಿಫೈಯರ್, ಚಿಮ್ನಿ ಮತ್ತು ಹಾಬ್ಸ್, ಏರ್ ಕೂಲರ್, ಫ್ಯಾನ್, ಗ್ರೈಂಡರ್, ಮಿಕ್ಸರ್, ಮೈಕ್ರೋವೇವ್ ಓವನ್, ಇಸ್ತ್ರಿಪೆಟ್ಟಿಗೆ, ಕ್ರಾಕರಿ ಹಾಗೂ ವಿವಿಧ ಗೃಹೋಪಯೋಗಿ ಮತ್ತು ಡೆಕೊರೇಟಿವ್ ಉತ್ಪನ್ನಗಳ ವ್ಯಾಪಕ ಶ್ರೇಣಿ ಲಭ್ಯವಿದೆ.
ಇದಲ್ಲದೆ, ಐ ಫೋನ್, ಸ್ಯಾಮ್ ಸ್ಯಾಂಗ್, ರೆಡ್ಮಿ, ನೋಕಿಯಾ, ವಿವೋ ಸೇರಿದಂತೆ ಪ್ರಮುಖ ಬ್ರಾಂಡ್ ಗಳ ಮೊಬೈಲ್ ಗಳು ಹಾಗೂ ಎಚ್ ಪಿ, ಡೆಲ್, ಲೆನೊವೊ ಸೇರಿದಂತೆ ಪ್ರಮುಖ ಬ್ರಾಂಡ್ ಗಳ ಲ್ಯಾಪ್ ಟಾಪ್, ಕಂಪ್ಯೂಟರ್ ಮತ್ತು ಇತರೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳೂ ಲಭ್ಯವಿವೆ.
ವಿಕೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಆಯೋಜಿಸಿರುವ ವಿಕೆ ಉತ್ಸವ್ 2026ರಲ್ಲಿ ಭಾಗವಹಿಸಿ, ತಮ್ಮ ಅಗತ್ಯಕ್ಕೆ ತಕ್ಕ ಫರ್ನಿಚರ್, ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಉತ್ಪನ್ನಗಳನ್ನು ಆಕರ್ಷಕ ದರದಲ್ಲಿ ಖರೀದಿಸಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ ಪಡೆಯಲು ಗ್ರಾಹಕರನ್ನು ಸಂಸ್ಥೆಯು ಆಹ್ವಾನಿಸಿದೆ.
ಗ್ರಾಹಕರು ಏರ್ಪೋರ್ಟ್ ರಸ್ತೆಯ ಯೆಯ್ಯಾಡಿ; ಕಲ್ಲಾಪು-ತೊಕ್ಕೊಟ್ಟು; ಉರ್ವಾ-ಚಿಲಿಂಬಿ; ವಾಮಂಜೂರು; ಸಂತ ಜೋಸೆಫ್ ಕಾಲೇಜು ಎದುರುಗಡೆ ಹಾಗೂ ಉಡುಪಿ ಕಡಿಯಾಳಿಯಲ್ಲಿರುವ ವಿಕೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಗಳಿಗೆ ಭೇಟಿ ನೀಡಿ ವಿಕೆ ಉತ್ಸವ್ 2026ರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.