ಮಂಗಳೂರು ಜ 11: ಕಾಟಿಪಳ್ಳ ನಿವಾಸಿ ದೀಪಕ್ ರಾವ್ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳಾದ ನೌಷದ್ ಮತ್ತು ಮಹಮ್ಮದ್ ಇರ್ಷಾದ್ ಅವರ ಪೊಲೀಸ್ ಕಸ್ಟಡಿ ಜ 11 ಕ್ಕೆ ಅಂತ್ಯವಾಗಿದ್ದು, ಈ ಕಾರಣದಿಂದ ಆರೋಪಿಗಳನ್ನು ಮತ್ತೆ ಇಂದು ನ್ಯಾಯಾಲಯ ಹಾಜರುಪಡಿಸಲಾಗುತ್ತಿದೆ. ಆರೋಪಿಗಳನ್ನು ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ವಿಚಾರಣೆಗಾಗಿ ಪಡೆದುಕೊಳ್ಳಲಾಗಿತ್ತು.
ಇನ್ನು ಪೊಲೀಸ್ ಕಸ್ಟಡಿಯಲ್ಲಿ ಬಹುತೇಕ ತನಿಖೆಯನ್ನು ನಡೆಸಿರುವುದರಿಂದ ಮತ್ತೆ ಆರೋಪಿಗಲನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಆದರೆ ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡ ಇನ್ನು ಇಬ್ಬರು ಆರೋಪಿಗಳಾದ ಪಿಂಕಿ ನವಾಜ್ ಮತ್ತು ರಿಜ್ವಾನ್ ತನಿಖೆ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಒಂದೆರಡು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಸಾಧ್ಯತೆ ಇರೋದ್ರಿಂದ ಬಳಿಕ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
ದೀಪಕ್ ರಾವ್