ಮಂಗಳೂರು, ಅ.17 (DaijiworldNews/AA): ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನವರಾತ್ರಿ ಮಹೋತ್ಸವದ ಸಂದರ್ಭ ಮಹತೋಭಾರ ಶ್ರೀ ಮಂಗಳಾದೇವಿ ಕ್ಷೇತ್ರಕ್ಕೆ ಆಗಮಿಸಿ ರಾಜ್ಯದ ಜನತೆಗೆ ಸಮೃದ್ಧ ಮಳೆಗೆ ಭಕ್ತಿಯಿಂದ ಪ್ರಾರ್ಥಿಸಿದರು.

ಕ್ಷೇತ್ರದ ಅನುವಂಶಿಕ ಆಡಳಿತ ಮುಕ್ತೇಸರರಾದ ಅರುಣ್ ಐತಾಳ್ ಅವರು ಮಂಗಳಾಂಬಿಕೆಯ ವಿಶೇಷ ಶೇಷ ವಸ್ತ್ರವನ್ನು ತೊಡಿಸಿ ಗೌರವಿಸಿದರು. ಅನುವಂಶಿಕ ಮುಕ್ತೇಸರರಾದ ಹರೀಶ್ ಐತಾಳ್ ಹಾಗೂ ಅನುವಂಶಿಕ ಮುಕ್ತೇಸರರಾದ ಜಿ ರಘುರಾಮ ಉಪಾಧ್ಯಾಯರು ಶ್ರೀಮಂಗಳಾಂಬಿಕೆಯ ವಿಶೇಷ ಪ್ರಸಾದ ಹಾಗೂ ಫಲತಟ್ಟೆ ನೀಡಿ ಗೌರವಿಸಿದರು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್, ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಪದ್ಮರಾಜ ಪೂಜಾರಿ, ಮಿಥುನ್ ರೈ, ನಿಕಟಪೂರ್ವ ಕಾರ್ಪೊರೇಟರ್ ನವೀನ್ ಚಂದ್ರ ಆಳ್ವ ಉಪಸ್ಥಿತರಿದ್ದರು.