ಮಂಗಳೂರು, ಅ.17 (DaijiworldNews/AA): ಪ್ರತಿಷ್ಠಿತ ಸಸ್ಯಾಹಾರ ಕೇಕ್ ತಯಾರಿಕಾ ಸಂಸ್ಥೆಯಾದ ಸೆವೆನ್ತ್ ಹೆವೆನ್ ನ 30ನೇ ಮಳಿಗೆ ಮಂಗಳೂರಿನ ಬೋಂದೆಲ್ ಮಹಾತ್ಮಗಾಂಧಿ ಕಾಲೇಜಿನ ಸಮೀಪದ ಲೋಟಸ್ ರೊವಿನ್ ಕಟ್ಟಡದ ನೆಲ ಮಹಡಿಯಲ್ಲಿ ಶುಕ್ರವಾರ ಶುಭಾರಂಭಗೊಂಡಿತು.










ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸಿಎ ಶಾಂತರಾಮ್ ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ, "ಉದ್ಯಮ ನಡೆಸುವುದು ತುಂಬಾ ಸಾಹಸಮಯವಾಗಿದೆ. ಪರಿಶ್ರಮ ಮತ್ತು ಛಲದಿಂದ ಸೆವೆಂತ್ ಹೆವೆನ್ ಆರಂಭಿಸಿ ಇಂದು 30 ಶಾಖೆಗಳೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಬ್ರಾಂಡ್ ಹಾಗೂ ಗ್ರಾಹಕರವೂ ಕೂಡ ಇಲ್ಲಿ ಪ್ರಮುಖವಾಗಿದೆ. ಉದ್ಯಮ ಮತ್ತಷ್ಟು ಬೆಳೆದು ರಾಜ್ಯದೆಲ್ಲೆಡೆ ಇನ್ನಷ್ಟು ಶಾಖೆ ತೆರೆಯುವಂತಾಗಲಿ" ಎಂದು ಶುಭ ಹಾರೈಸಿದರು.
ಚಲನಚಿತ್ರ ನಟ, ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಮಾತನಾಡಿ, "30 ಶಾಖೆಗಳನ್ನು ಆರಂಭಿಸಿ ಮುನ್ನಡೆಯುವುದು ಅಸಾಮಾನ್ಯ ವಿಚಾರ. ಸಂಸ್ಥೆಯ ಸ್ಥಾಪಕರ ಸಾಮಾಜಿಕ ಚಿಂತನೆಯ ಬದುಕು ಅವರಿಗೆ ಯಶಸ್ಸು ತಂದುಕೊಟ್ಟಿದೆ" ಎಂದರು.
ಚಿತ್ರನಟ ಪೃಥ್ವಿ ಅಂಬರ್, ನಿರೂಪಕ ಸಂದೀಪ್,ಭವಿಶ್ ಶೆಟ್ಟಿ ಶುಭ ಹಾರೈಸಿದರು.
ಸೆವೆಂತ್ ಹೆವೆನ್ ಮಾಸ್ಟರ್ ಫ್ರ್ಯಾಂಚೈಸರ್ ಶಮಿತ್ ಶೆಟ್ಟಿ, ಚೇತನ್ ಶೆಟ್ಟಿ, ದೀಪಕ್ ಶೆಟ್ಟಿ, ಕುಟುಂಬಸ್ಥರಾದ ಅಶೋಕ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸುಧಾಕರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಉಪಸ್ಥಿತರಿದ್ದರು. ಹರ್ಷಿತಾ ಶೆಟ್ಟಿ ನಿರೂಪಿಸಿ ವಂದಿಸಿದರು.