ಕುಂದಾಪುರ, ಅ.18 (DaijiworldNews/AA): ವಿದೇಶದಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ಕೋಟೇಶ್ವರದ ಯುವಕನೋರ್ವ ಅಬುಧಾಬಿಯಲ್ಲಿ ಅಸಹಜವಾಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಕೋಟೇಶ್ವರ ಸಮೀಪದ ಕುಂಬ್ರಿ ನಿವಾಸಿ ಜಾರ್ಜ್ ಕ್ರಾಸ್ತಾ ಹಾಗೂ ಸುನಿತಾ ಕ್ರಾಸ್ತಾ ಅವರ ಪುತ್ರ ಲಿಂಕನ್ ಕ್ರಾಸ್ತಾ (29) ಎಂದು ಗುರುತಿಸಲಾಗಿದೆ.
ಲಿಂಕನ್ ಅವರು ಕೆಲವು ಕಾಲದಿಂದ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ರೂಮ್ನಲ್ಲಿ ವಾಸವಾಗಿದ್ದರು. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಮೂಲಗಳ ಪ್ರಕಾರ, ಅವರ ಮೃತದೇಹವನ್ನು ಭಾನುವಾರ, ಅಕ್ಟೋಬರ್ 18 ರಂದು ಅವರ ಸ್ವಗ್ರಾಮಕ್ಕೆ ತರಲಾಗುವುದು ಎಂದು ತಿಳಿದುಬಂದಿದೆ.