ಉಡುಪಿ, ಅ.18 (DaijiworldNews/AA): ದಾಯ್ಜಿವಲ್ಡ್ ಉಡುಪಿ – ಕಿಶೂ ಎಂಟರ್ಪ್ರೈಸಸ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 'ರಂಗಿನ ರಂಗೋಲಿ 2026' ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ನವೆಂಬರ್ 1ರ ಭಾನುವಾರ ಉಡುಪಿಯ ಕನ್ನರ್ಪಾಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದೆ.

ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, 16 ವರ್ಷದವರೆಗಿನವರಿಗೆ ಒಂದು ವಿಭಾಗ ಹಾಗೂ 16 ವರ್ಷ ಮೇಲ್ಪಟ್ಟವರಿಗೆ ಮತ್ತೊಂದು ವಿಭಾಗವನ್ನು ನಿಗದಿಪಡಿಸಲಾಗಿದೆ. ಎಲ್ಲರಿಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ.
ಸ್ಪರ್ಧಿಗಳು ಗರಿಷ್ಠ 4x4 ಅಡಿ ಅಳತೆಯೊಳಗೆ ರಂಗೋಲಿಯನ್ನು ಬಿಡಿಸಬೇಕು. ಸ್ಪರ್ಧೆಗೆ ಎರಡು ಗಂಟೆಗಳ ಕಾಲಾವಕಾಶ ನೀಡಲಾಗುವುದು. ಕೇವಲ ರಂಗೋಲಿ ಪುಡಿಯನ್ನು ಬಳಸಿ ರಂಗೋಲಿ ಬಿಡಿಸಬೇಕಿದ್ದು, ಅಗತ್ಯವಿರುವ ಎಲ್ಲ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕು. ಸ್ಪರ್ಧಿಗಳ ಸೃಜನಶೀಲತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.ತೀರ್ಪುಗಾರರ ತೀರ್ಮಾನವೇ ಅಂತಿಮ.
ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ನಗದು ಬಹುಮಾನ, ಫಲಕ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು. ಅಲ್ಲದೆ, ಪ್ರತೀ ವಿಭಾಗದಲ್ಲಿ ಮೂರು ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ವಿತರಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಅಕ್ಟೋಬರ್ 26ರೊಳಗೆ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ Daijiworldudupi.com/rangoli26 ಸಂಪರ್ಕಿಸಬಹುದು.