ಮಂಗಳೂರು, ಅ.19 (DaijiworldNews/TA) : ನಾಡಿನೆಲ್ಲೆಡೆ ಶ್ರದ್ದಾಭಕ್ತಿಯಿಂದ ಆಯುಧ ಪೂಜೆಯನ್ನು ಆಚರಿಸಲಾಗಿದ್ದು, ಅದರಂತೆ ವರ್ಷಂಪ್ರತಿಯಂತೆ ಈ ಬಾರಿ ಕೂಡ ಮಂಗಳೂರಿನ ದಾಯ್ಜಿವರ್ಲ್ಡ್ ಸಂಸ್ಥೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.





ಈ ವೇಳೆ ದಾಯ್ಜಿವರ್ಲ್ಡ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಮೆಲ್ವಿನ್ ರೊಡ್ರಿಗಸ್, ಮಾರ್ಕೆಟಿಂಗ್ ಡೈರೆಕ್ಟರ್ ಅಲೆಕ್ಸಿಸ್ ಕ್ಯಾಸ್ತೇಲಿನೋ, ಎಚ್ ಆರ್ ಡೈರೆಕ್ಟರ್ ರೊನಾಲ್ಡ್ ನಝರೆತ್ ಸೇರಿದಂತೆ ಎಲ್ಲಾ ಆಡಳಿತ, ಸಿಬ್ಬಂದಿ ವರ್ಗ ಪೂಜಾ ವಿಧಿ ವಿಧಾನದಲ್ಲಿ ಪಾಲ್ಗೊಂಡರು. ಸರ್ವಧರ್ಮ ಸಮನ್ವಯದ ಪ್ರತೀಕವಾಗಿರುವ ದಾಯ್ಜಿವರ್ಲ್ಡ್ ಸಂಸ್ಥೆಯನ್ನು ಈ ವಿಶೇಷ ಸಂದರ್ಭದಲ್ಲಿ ಆಕರ್ಷಕ ಹೂವಿನ ಅಲಂಕಾರಗಳಿಂದ ಶೃಂಗರಿಸಲಾಗಿತ್ತು.
ಸಂಸ್ಥೆಯಲ್ಲಿ ಬಳಸುವ ವಿವಿಧ ಉಪಕರಣಗಳಿಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಅವುಗಳ ಸುಗಮ ಕಾರ್ಯನಿರ್ವಹಣೆ ಹಾಗೂ ಸಂಸ್ಥೆಯ ಅಭಿವೃದ್ಧಿಗಾಗಿ ಪ್ರಾರ್ಥಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಒಗ್ಗಟ್ಟಿನಿಂದ ಪಾಲ್ಗೊಂಡ ಈ ಆಚರಣೆಯು ಭಕ್ತಿ, ಸಂಪ್ರದಾಯ ಹಾಗೂ ಸೌಹಾರ್ದತೆಯ ಸಂದೇಶವನ್ನು ಸಾರಿತು.