ಬ್ರಹ್ಮಾವರ, ಅ.22 (DaijiworldNews/AA): ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ 62 ವರ್ಷದ ಸೈಕಲ್ ಸವಾರರೊಬ್ಬರಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಮಾಬುಕಳದ ಎನ್ಹೆಚ್ 66ರಲ್ಲಿ ಅಕ್ಟೋಬರ್ 22ರಂದು ನಡೆದಿದೆ.
.jpg)
ಮೃತರನ್ನು ರಂಜಿತಾ ಲೂಯಿಸ್ ಅವರ ತಂದೆ ರೊನಾಲ್ಡ್ ಲೂಯಿಸ್ (62) ಎಂದು ಗುರುತಿಸಲಾಗಿದೆ.
ರೊನಾಲ್ಡ್ ಅವರು ಮಾಬುಕಳ ಬಳಿ ತಮ್ಮ ಸೈಕಲ್ನೊಂದಿಗೆ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾಪುವಿನಿಂದ ಕುಮಟಾ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದ ಲಾರಿಯೊಂದು ಅವರಿಗೆ ಡಿಕ್ಕಿ ಹೊಡೆದಿದೆ.
ಅವರನ್ನು ತಕ್ಷಣವೇ ಬ್ರಹ್ಮಾವರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮೃತರು ಪತ್ನಿ ಮತ್ತು ಮಗಳಾದ ರಂಜಿತಾ ಲೂಯಿಸ್ ಅವರನ್ನು ಅಗಲಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.