ಮಂಗಳೂರು, ನ 01 (DaijiworldNews/TA): ಹೊರವಲಯದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಡುಂಬೂರು ಸಮೀಪ ಮಾದಕ ಸೇವನೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.ಪುಷ್ಪರಾಜ್ ದಹಯತ್ (36) ಮತ್ತು ಪುಷ್ಪೇಂದ್ರ ಕುಮಾರ್ (30) ಬಂಧಿತರು.

ಅ.30ರಂದು ಸಂಜೆ 5:30ಕ್ಕೆ ಕುಡುಂಬೂರು ಬಳಿ ಇವರಿಬ್ಬರು ಅನುಮಾನಾಸ್ಪದವಾಗಿ ನಿಂತಿರುವುದು ಕಂಡ ಪೊಲೀಸರು ವಿಚಾರಿಸಿದಾಗ ನಶೆಯಲ್ಲಿರುವಂತೆ ಕಂಡುಬಂದಿದ್ದರು. ಬಳಿಕ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೊಳ ಪಡಿಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ. ಅದರಂತೆ ಎನ್ಡಿಪಿಎಸ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪಣಂಬೂರು ತಿಳಿಸಿದ್ದಾರೆ.