ಬಂಟ್ವಾಳ, ನ.02 (DaijiworldNews/AA): ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸಾಧನೆ ಹಾಗೂ ಕೊಡುಗೆಗಳನ್ನು ಗುರುತಿಸಿ ರೀಟಾ ಮರಿಯಾ ಮಿನೆಜಸ್ ಅವರಿಗೆ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ' ಪ್ರದಾನ ಮಾಡಲಾಯಿತು.

ಕೃಷಿ ಕ್ಷೇತ್ರವು ಸಮಾಜದ ಪ್ರಮುಖ ಅಂಗವಾಗಿದ್ದು, ಆಹಾರ ಭದ್ರತೆ ಹಾಗೂ ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ರೀಟಾ ಮರಿಯಾ ಮಿನೆಜಸ್ ಅವರು ಸಲ್ಲಿಸಿರುವ ಸೇವೆ, ಸಾಧನೆ ಹಾಗೂ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿ ನೀಡಲಾಯಿತು.
ಕೃಷಿ ಕ್ಷೇತ್ರದಲ್ಲಿ ರೀಟಾ ಅವರ ಸಾಧನೆ ಇತರರಿಗೆ ಮಾದರಿಯಾಗಿದೆ. ಕೃಷಿಯ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವಲ್ಲಿ ರೀಟಾ ಅವರ ಕೊಡುಗೆ ಶ್ಲಾಘನೀಯ.
ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ರೀಟಾ ಮರಿಯಾ ಮಿನೆಜಸ್ ಅವರಿಗೆ ವಿವಿಧ ಗಣ್ಯರು, ಹಿತೈಷಿಗಳು ಹಾಗೂ ಬಂಧುಮಿತ್ರರು ಶುಭಾಶಯ ಕೋರಿದ್ದಾರೆ.