ಮಂಗಳೂರು, ನ.03 (DaijiworldNews/AK): ಕಳೆದ 38 ವರ್ಷಗಳಿಂದ ಹಲವಾರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡಾಕ್ಷೇತ್ರ, ವೈದ್ಯಕೀಯ ನೆರವು ಹಾಗೂ ಇತರೆ ಸಮಾಜಮುಖಿ ಕೆಲಸ ಕಾರ್ಯಕ್ರಮಗಳ ಮೂಲಕ ಕೋಡಿಕಲ್ ಪರಿಸರದಲ್ಲಿ ಜನ ಮನ್ನಣೆಗಳಿಸಿರುವ ಶ್ರೀ ನಾಗಬ್ರಹ್ಮ ತರುಣ ವೃಂದ ಕೋಡಿಕಲ್ ಇವರ ಸೇವಾ ಚಟುವಟಿಕೆಗಳು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಮೂಲಕ ಗೌರವಿಸಲಾಗಿದೆ.







ಮಂಗಳೂರು ನೆಹರೂ ಮೈದಾನದಲ್ಲಿ ಜರಗಿದ ಜಿಲ್ಲಾ ರಾಜ್ಯೋತ್ಸವದ ಸಮಾರಂಭದಲ್ಲಿ ನಾಗಬ್ರಹ್ಮ ತರುಣ ವೇದಿಕೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು. ದೊರೆತ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿ ಹಿರಿಯರ ಸೇವಾಭಾವನೆಯನ್ನು ಸ್ಮರಿಸುತ್ತಾ, ಮುಂದೆಯೂ ಸಮಾಜಕ್ಕೆ ಇನ್ನಷ್ಟು ಉತ್ತಮ ಪ್ರಶಸ್ತಿ ರೀತಿಯ ಸೇವೆ ನೀಡುವ ಆಶಯವನ್ನು ಹೊಂದಿದೆ.