ಉಡುಪಿ, ನ.04 (DaijiworldNews/AK): ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರವಾದ ಮಣಿಪಾಲದಲ್ಲಿ ಜನನಿಬಿಡ ರಸ್ತೆಯ ಮಧ್ಯದಲ್ಲಿ ಯುವಕರ ಗುಂಪೊಂದು ತಡರಾತ್ರಿ ಹೊಡೆದಾಟ , ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.



ಪ್ರಾಥಮಿಕ ವರದಿಗಳ ಪ್ರಕಾರ, ಮದ್ಯದ ಅಮಲಿನಲ್ಲಿದ್ದ ಇಬ್ಬರು ಯುವಕರ ನಡುವೆ ಆರಂಭವಾದ ಸಣ್ಣ ಗಲಾಟೆ, ನಂತರ ದೊಡ್ಡದಾಗಿ ಎರಡು ಗುಂಪುಗಳ ನಡುವಿನ ಭೀಕರ ಹೊಡೆದಾಟಕ್ಕೆ ಕಾರಣವಾಗಿದೆ. ಯುವಕರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಕುತೂಹಲಕಾರಿಯಾಗಿ, ಈ ಘಟನೆ ಮಣಿಪಾಲ ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿ ನಡೆದಿದ್ದು, ಆ ಪ್ರದೇಶದಲ್ಲಿ ತಡರಾತ್ರಿ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಣಿಪಾಲದ ಪಬ್ ಮತ್ತು ಬಾರ್ಗಳ ಮುಂದೆ ಅವಧಿ ಮೀರಿ ಮದ್ಯ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಈ ಹಿಂದೆ ಬಾರ್ಗಳ ಒಳಗಷ್ಟೇ ಸೀಮಿತವಾಗಿದ್ದ ಜಗಳಗಳು ಈಗ ಸಾರ್ವಜನಿಕ ರಸ್ತೆಗಳಿಗೆ ಮುಂದುವರಿದಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಅನುಮತಿ ಪಡೆದ ಸಮಯಕ್ಕಿಂತ ಮೀರಿ ಕಾರ್ಯನಿರ್ವಹಿಸುವ ಬಾರ್ಗಳು ಮತ್ತು ರೆಸ್ಟೋರೆಂಟ್ಗಳ ವಿರುದ್ಧ ಪೊಲೀಸರು ಈ ಹಿಂದೆ ಕ್ರಮ ಕೈಗೊಂಡಿದ್ದರೂ, ತಡರಾತ್ರಿಯವರೆಗೆ ಮದ್ಯ ಸೇವನೆಗೆ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಮಣಿಪಾಲದಲ್ಲಿ ಪಬ್ಗಳು ಮತ್ತು ಬಾರ್ಗಳ ಹೊರಗೆ ಆಗಾಗ್ಗೆ ನಡೆಯುವ ವಾಗ್ವಾದಗಳ ಬಗ್ಗೆ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅನುಮತಿ ಪಡೆದ ಸಮಯಕ್ಕಿಂತ ಮೀರಿ ಕಾರ್ಯನಿರ್ವಹಿಸುವ ಬಾರ್ಗಳು ಮತ್ತು ರೆಸ್ಟೋರೆಂಟ್ಗಳ ವಿರುದ್ಧ ಪೊಲೀಸರು ಈ ಹಿಂದೆ ಕ್ರಮ ಕೈಗೊಂಡಿದ್ದರೂ, ತಡರಾತ್ರಿಯವರೆಗೆ ಮದ್ಯ ಸೇವನೆಗೆ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪಗಳು ಈಗ ಕೇಳಿ ಬರುತ್ತಿದೆ.
ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮಣಿಪಾಲದಲ್ಲಿ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಡರಾತ್ರಿ ಗಸ್ತು ತಿರುಗುವಿಕೆಯನ್ನು ಬಲಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.