ಉಳ್ಳಾಲ, ನ.05 (DaijiworldNews/TA): ತೊಕ್ಕೊಟ್ಟು ಒಳಪೇಟೆಯಲ್ಲಿರುವ ಬಿ.ಆರ್ ಬೇಕರಿ ಒಳನುಗ್ಗಿರುವ ಕಳ್ಳನೋರ್ವ ಕ್ಯಾಷ್ ನಲ್ಲಿದ್ದ ರೂ. 30,000 ನಗದು ಕಳವುಗೈದಿದ್ದು, ಕಳ್ಳನ ಕೃತ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.

ಕಳೆದ 5 ವರ್ಷಗಳಿಂದ ತೊಕ್ಕೊಟ್ಟು ಒಳಪೇಟಯಲ್ಲಿ ಬಿ.ಆರ್ ಬೇಕರಿ ಕಾರ್ಯಾಚರಿಸುತ್ತಿದೆ. ಮೊನ್ನೆ ತಡರಾತ್ರಿ ಕೇಕ್ ಗೋಡೌನ್ ಹಿಂಬದಿಯ ಗೋಡೆಯನ್ನು ಕೊರೆದು ಬೇಕರಿ ಅಂಗಡಿಯೊಳಕ್ಕೆ ಹರಿತವಾದ ಆಯುಧವನ್ನು ಹಿಡಿದುಕೊಂಡು ಒಳನುಗ್ಗಿದ ಕಳ್ಳ, ಬಳಿಕ ಕ್ಯಾಷ್ ಡ್ರಾವರನ್ನು ಒಡೆದು ರೂ.30,000 ನಗದು ಹಾಗೂ ಮೊಬೈಲ್ ಕಳವು ನಡೆಸಿದ್ದಾನೆ. ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.