ಬಂಟ್ವಾಳ, ನ.09 (DaijiworldNews/TA): ಪೆರಾಜೆ ಗ್ರಾಮದ ಮಂಜೊಟ್ಟಿ ಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅರಸು ಗುಡ್ಡ ಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಹಾಗೂ ಮಲೆಕೊರತಿ ದೈವಗಳ ಪುದ್ವಾರ್ ಮೆಚ್ಚಿ ನೇಮವು ವಿಜೃಂಭಣೆಯಿಂದ ಜರುಗಿತು.


ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಗುತ್ತು ಮನೆಯವರು, ದೈವ ಚಾಕರಿಯವರು, ದೈವದ ಲೆಪ್ಪು-ಮರ್ಯಾದೆಯ ಮನೆಯವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದು, ದೈವಗಳ ಗಂಧಪ್ರಸಾದ ಸ್ವೀಕರಿಸಿ ಕೃಪೆಗೆ ಪಾತ್ರರಾದರು.