ಮಂಗಳೂರು, ನ.13 (DaijiworldNews/AK): ಮಹಿಳೆಯ ಆರೋಗ್ಯ ತಾಯ್ತನದೊಂದಿಗೆ ಮುಗಿಯುವುದಿಲ್ಲ. ಮೆನೋಪಾಸ್ ಹಂತವನ್ನು ಮಹಿಳೆಯರು ಮೌನವಾಗಿ ಸಹಿಸಿಕೊಳ್ಳಬೇಕಾಗಿಲ್ಲ.

ನಿದ್ದೆ ಬಾರದ ರಾತ್ರಿಗಳು, ಇದ್ದಕ್ಕಿದ್ದಂತೆ ಮೈ ಬಿಸಿಯಾಗುವುದು, ಕೀಲು ನೋವು, ಮೂಳೆಗಳು ದುರ್ಬಲವಾಗುವುದು, ಆತಂಕ ಮತ್ತು ಮನಸ್ಸಿನ ಏರುಪೇರು. ಇವೆಲ್ಲವೂ ನಿಜವಾದ ಆರೋಗ್ಯ ಸಮಸ್ಯೆಗಳು. "ವಯಸ್ಸಾಯಿತು, ಇದೆಲ್ಲ ಸಹಜ" ಎಂದು ಕಡೆಗಣಿಸುವ ವಿಷಯವಲ್ಲ. ಇವುಗಳಿಗೆ ಅರ್ಥಮಾಡಿಕೊಳ್ಳುವ ಮನಸ್ಸು, ಸಮಯಕ್ಕೆ ಸರಿಯಾದ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಬೇಕು.
ಈ ನಿಟ್ಟಿನಲ್ಲಿ, 35 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ 'ಋತು ತಾರೆ' – ಕರ್ನಾಟಕ ರಾಜ್ಯ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಮೆನೋಪಾಸ್ ಕಾರ್ಯಕ್ರಮ ಜಾರಿಗೆ ನಮ್ಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ Department of Health and Family Welfare Services Govt of Karnataka ಇಂದು ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಪ್ರಾಯೋಗಿಕ ಕಾರ್ಯಕ್ರಮ ಆರಂಭವಾಗಲಿದೆ. ಇದರಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕ್ಲಿನಿಕ್ಗಳು, ಸಮಗ್ರ ಆರೋಗ್ಯ ತಪಾಸಣೆ, ಮಾನಸಿಕ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಮಾರ್ಗದರ್ಶನ, ಅಗತ್ಯವಿದ್ದರೆ ತಜ್ಞ ವೈದ್ಯರ ಬಳಿ ಚಿಕಿತ್ಸೆ ಹಾಗೂ 'ಮಿಡ್-ಲೈಫ್ ಹೆಲ್ತ್ ಕಾರ್ಡ್' ಸಿಗಲಿದೆ.
ನಟಿ ಹಾಗೂ ಮಾಜಿ ಸಂಸದೆ ರಮ್ಯಾ Divya Spandana/Ramya ಅವರು ಈ ಕಾರ್ಯಕ್ರಮದ ರಾಯಭಾರಿಯಾಗಿ ನಮ್ಮ ಜೊತೆಯಾಗಿದ್ದಾರೆ. ಅವರ ಧ್ವನಿ ಈ ಮಹತ್ವದ ಸಂದೇಶವನ್ನು ರಾಜ್ಯದ ಮೂಲೆ ಮೂಲೆಯ ಮಹಿಳೆಯರಿಗೆ ತಲುಪಿಸಲಿದೆ.
ಪ್ರಾಯೋಗಿಕ ಹಂತ ಮುಗಿದ ನಂತರ, ಈ ಕಾರ್ಯಕ್ರಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುತ್ತೇವೆ ಎಂದು ಖಾದರ್ ತಿಳಿಸಿದರು.
ಬದುಕಿನ ಪ್ರತಿ ಹಂತದಲ್ಲೂ ಪ್ರತಿಯೊಬ್ಬ ಮಹಿಳೆಗೆ ಉತ್ತಮ ಆರೋಗ್ಯ, ಸೂಕ್ತ ಆರೈಕೆ ಮತ್ತು ಘನತೆಯ ಬದುಕು ಸಿಗಬೇಕು. 'ಋತು ತಾರೆ' ಆ ದಿಕ್ಕಿನಲ್ಲಿ ನಾವು ಇಡುತ್ತಿರುವ ಮಹತ್ವದ ಹೆಜ್ಜೆ ಎಂದರು.