ಮಂಗಳೂರು, ನ.15 (DaijiworldNews/AA): ಮಂಗಳೂರಿನ ಬಿಕರ್ನಕಟ್ಟೆ ಪೊಲೀಸ್ ಠಾಣೆಯ ನೂತನ ಕಟ್ಟಡ ಕಾಮಗಾರಿಯನ್ನು ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಹೆಸರಾಂತ ಕೊಡುಗೈ ದಾನಿ ಡಾ| ರೊನಾಲ್ಡ್ ಕೊಲಾಸೋ ಅವರು ಭಾನುವಾರ ಪರಿಶೀಲಿಸಿದರು.













ಮಂಗಳೂರಿನ ಬಿಕರ್ನಕಟ್ಟೆ ಪೊಲೀಸ್ ಠಾಣೆಯು ಶೀಘ್ರದಲ್ಲೇ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಈ ನೂತನ ಕಟ್ಟಡದ ನಿರ್ಮಾಣ ಕಾರ್ಯವು ಡಾ| ರೊನಾಲ್ಡ್ ಕೊಲಾಸೋ ಅವರ ನೇತೃತ್ವದಲ್ಲಿ ನಡೆಯುತ್ತಿದೆ.
ಡಾ| ರೊನಾಲ್ಡ್ ಕೊಲಾಸೋ ಅವರು ಸ್ವತಃ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡದ ನಿರ್ಮಾಣ ಪ್ರಗತಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಾಮಗಾರಿಯ ಗುಣಮಟ್ಟ ಹಾಗೂ ಮುಂದಿನ ಹಂತದ ಕೆಲಸಗಳ ಕುರಿತು ಗುತ್ತಿಗೆದಾರರು ಮತ್ತು ವಾಸ್ತುಶಿಲ್ಪಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಆಸ್ಟಿನ್ ಪೆರೀಸ್, ರೋನ್ಸ್ ಬಂಟ್ವಾಳ್, ಡೆನಿಸ್ ಡಿ'ಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.