ಉಡುಪಿ, ನ.16 (DaijiworldNews/AK): ನವೆಂಬರ್ 15 ರ ಭಾನುವಾರ ಮುಂಜಾನೆ ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ದನ ಕಳ್ಳತನಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ.

ವರದಿಗಳ ಪ್ರಕಾರ, ಕಾರಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳುದೇವಾಲಯದ ಬಳಿ ವಿಶ್ರಾಂತಿ ಪಡೆಯುತ್ತಿದ್ದ ದನಗಳನ್ನು ಕದಿಯಲು ಪ್ರಯತ್ನಿಸಿದ್ದಾರೆ,
ಕಾರಿನಿಂದ ಇಳಿದು ಮಲಗಿದ ದನಗಳ ಬಳಿ ಬರುತ್ತಿದ ಇಬ್ಬರನ್ನು ಕಂಡ ದನದ ಹಿಂಡು ಹೆದರಿ ಅಲ್ಲಿಂದ ಓಡಿ ಹೋಗಿದೆ. ಇದರ ಪರಿಣಾಮ, ಕಳ್ಳಕೈಗೆ ಸಿಗದೆ ದನಗಳು ತಪ್ಪಿಸಿಕೊಂಡಿವೆ.
ದನಗಳು ಓಡಿಹೋದ ನಂತರವೂ ಅಪರಿಚಿತ ವ್ಯಕ್ತಿಗಳು ಸ್ಥಳದಲ್ಲಿ ಸ್ವಲ್ಪ ಹೊತ್ತು ಕಾದು, ಕೊನೆಗೆ ತಮ್ಮ ಕಾರಿನಲ್ಲಿ ಪರಾರಿಯಾದರು.
ಈ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಬೆಳಗಿನ ಜಾವ ನಡೆದ ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿದ್ದು, ದನ ಕಳ್ಳತನಕ್ಕೆ ಯತ್ನಿಸಿದವರನ್ನು ಗುರುತಿಸಿ ಪತ್ತೆ ಹಚ್ಚುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ.