ಮಂಗಳೂರು, ನ.17 (DaijiworldNews/TA): ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಅವರ ಶಿಷ್ಯ ವೃಂದದ ಮಯೂರ ಪ್ರತಿಷ್ಠಾನದ ದ್ವಿತೀಯ ವಾರ್ಷಿಕೋತ್ಸವ 'ಮಯೂರ ಯಾನ -2' ಕಾರ್ಯಕ್ರಮ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಆವರಣದಲ್ಲಿ ನ.14ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ದೇವಸ್ಥಾನದ ತಂತ್ರಿ ವೇ.ಮೂ. ಕೃಷ್ಣರಾಜ ತಂತ್ರಿ ಅವರು ಮಾತನಾಡಿ, ಯಕ್ಷಗಾನದಿಂದ ಪುರಾಣ ಜ್ಞಾನ ವಿಸ್ತರಿಸುತ್ತಿದ್ದು, ಯುವ ಕಲಾವಿದರಿಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದರು. ಪ್ರತಿಷ್ಠಾನದ ಅಧ್ಯಕ್ಷ ಪಿ. ಸದಾಶಿವ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರಿಗೆ 'ಮಯೂರ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರವೀಂದ್ರ ನಾಯಕ್ ಕೆ., ವಿಜಯ್ ಕುಮಾರ್ ಶೆಟ್ಟಿ, ರಮಾನಂದ ನೂಜಿಪ್ಪಾಡಿ, ದೇವಸ್ಥಾನದ ಇಒ ಪ್ರವೀಣ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಬಳಿಕ ರಕ್ಷಿತ್ ಶೆಟ್ಟಿ ಪಡ್ರೆ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.