ಬೆಳ್ತಂಗಡಿ, ನ.17 (DaijiworldNews/AK):ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು FSL (Forensic Science Laboratory/ವಿಧಿವಿಜ್ಞಾನ ಪ್ರಯೋಗಾಲಯ) ವೈದ್ಯರನ್ನೊಳಗೊಂಡ ಮೆಡಿಕಲ್ ಬೋರ್ಡ್ನ್ನು ಎಸ್ಐಟಿ ರಚಿಸಿದೆ.

ಬೆಂಗಳೂರು, ಹಾವೇರಿ ಮತ್ತು ಬೆಳಗಾವಿಯ ಮೂರು ಜಿಲ್ಲಾ FSL ವೈದ್ಯರು ಈ ತಂಡದಲ್ಲಿ ಇದ್ದಾರೆ. ಓರ್ವ ಮಹಿಳಾ ವೈದ್ಯೆ, ಇಬ್ಬರು ಪುರುಷ ವೈದ್ಯರನ್ನು ಈ ತಂಡ ಒಳಗೊಂಡಿದೆ. ಮೆಡಿಕಲ್ ಬೋರ್ಡ್ ರಚನೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು.
ಆದೇಶದಂತೆ SIT ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರು ತಂಡ ರಚಿಸಿದ್ದಾರೆ. ಸೌಜನ್ಯ ಮೃತದೇಹ ಸಿಕ್ಕ ಮಣ್ಣಸಂಕದ ಕಾಡಿಗೆ ಇತ್ತೀಚೆಗೆ ಎಸ್ಐಟಿ ಅಧಿಕಾರಿಗಳು ಭೇಟಿ ನೀಡಿದ್ದರು. 14 ವರ್ಷದ ಹಿಂದಿನ ಪ್ರಕರಣದಲ್ಲಿ ಸೌಜನ್ಯ ಮೃತದೇಹ ಸಿಕ್ಕ ಜಾಗದಲ್ಲಿ ಮರುಸೃಷ್ಠಿ ಮಾಡಲಾಗಿತ್ತು.
ಎಸ್ಐಟಿ ತನಿಖಾಧಿಕಾರಿ ನೇತೃತ್ವದಲ್ಲಿ ಮರುಸೃಷ್ಠಿ ಮಾಡಲಾಗಿತ್ತು. ಎಸ್ಐಟಿ ತಂಡದ ಜೊತೆ ಎಫ್ಎಸ್ಎಲ್ ಸಿಬ್ಬಂದಿ ಕೂಡ ಆಗಮಿಸಿದ್ದರು. ಸೌಜನ್ಯ ಮೃತದೇಹ ಸಿಕ್ಕ ಸ್ಥಳವನ್ನು ಕುಟುಂಬಸ್ಥರು ತೋರಿಸಿದ್ದರು.