ಚಿಕ್ಕಮಂಗಳೂರು,ಸೆ.05: ಹಿಂದೂ ಹಿಂದೂ ಸಂಘಟನೆಯ ಯುವಕರ ಹತ್ಯೆಗಳನ್ನು ಮತ್ತು ಸರಕಾರದ ವೈಫಲ್ಯವನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡ ಮಂಗಳೂರು ಚಲೋ ರ್ಯಾಲಿಯನ್ನು ತಡೆಯುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಬೈಕ್ ರ್ಯಾಲಿ ಮಾಡಿಯೇ ಮಾಡುತ್ತೇವೆ. ಮಂಗಳೂರಿಗೆ ಹೋಗಿಯೇ ಹೋಗುತ್ತೇವೆ ಎಂದಿದ್ದಾರೆ. ನಮ್ಮದು ಭಯೋತ್ಪಾದಕ ಸಂಘಟನೆಯಲ್ಲ, ನಾವೇನು ಬಾಂಬ್ ಹಿಡಿದು ಕೊಂಡು ಮಂಗಳೂರಿಗೆ ಹೋಗ್ತಾ ಇಲ್ಲ. ಬಿಜೆಪಿ ಬಾವುಟ ಹಿಡಿದುಕೊಂಡು ಹೋಗುತ್ತಿದ್ದೇವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇಲ್ಲಿನ ಸರಕಾರವು ಸಮಾಜ ಹೊಡಿಯು ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿದೆ. ಮಾತ್ರವಲ್ಲದೆ ಇಂತಹ ಕೆಲಸಗಳಲ್ಲಿ ರಾಜಕೀಯ ನಡೆಸುತ್ತಿದ್ದಾರೆ ಎಂದವರು ದೂರಿದರು.