ಮಂಗಳೂರು,ಸೆ.05: ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಯಾವುದೇ ಪ್ರತಿರೋಧವಿಲ್ಲ. ಆದರೆ ವಿವಿಧ ಜಿಲ್ಲೆಗಳಲ್ಲಿ ರ್ಯಾಲಿ ನಡೆಸುವುದರಿಂದ ಅಹಿತಕರ ಘಟನೆಗಳು ಸಂಭವಿಸಿದರೆ ಅದು ಸರಕಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಚಿವ ಬಿ ರಮಾನಾಥ್ ರೈ ಮಂಗಳೂರಿನಲ್ಲಿ ಸುದ್ದಿಗಾರಿಗೆ ತಿಳಿಸಿದರು. ವಿವಿಧ ಜಿಲ್ಲೆಗಳಲ್ಲಿ ಬೈಕ್ ರ್ಯಾಲಿ ನಡೆಯುವ ಸಂದರ್ಭ ಸುಗಮ ಸಂಚಾರ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಯ ಒದಗಿಸುವುದು, ಕಾನೂನು ಪರಿಪಾನೆಯನ್ನು ಆಯಾಯ ಜಿಲ್ಲೆಯ ಪೊಲೀಸರು ನೋಡಿಕೊಳ್ಳಬೇಕು
ಇನ್ನೂ ಇಲ್ಲಿ ಕೇವಲ ಸಂಘಪರಿವಾರಕ್ಕೆ ಸೇರಿದವರ ಹತ್ಯೆ ಮಾತ್ರ ನಡೆದಿರುದಲ್ಲ. ಕಳೆದ ಹಲವು ವರ್ಷಗಳಿಂದ ಇತರ ಅಮಾಯಕರ ಹತ್ಯೆಯು ನಡೆದಿದೆ ಎಂದವರು ಹೇಳಿದರು. ಇನ್ನೂ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವನ ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯದ ನಡಿಗೆ ನಡೆಸಲು ಮುಂದಾಗಿದ್ದೇವೆ. ಇದು ಯಾವುದೇ ಪಕ್ಷದ ನೇತೃತ್ವದಲ್ಲ ನಮ್ಮ ನಡಿಗೆ ಎಂದವರು ಹೇಳಿದರು.