ಕಾಞ೦ಗಾಡ್,ಸೆ.05: ಪತಿ ಮನೆಯವರ ಕಿರುಕುಳದಿಂದ ಬೇಸತ್ತು ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಞ೦ಗಾಡ್ ನಲ್ಲಿ ನಡೆದಿದೆ.ವೆಳ್ಳಿಕೋತ್ ಪೇರಲದ ಗಲ್ಫ್ ಉದ್ಯೋಗಿ ಬಾಬು ರವರ ಪತ್ನಿ ಎಂ. ಸುಧಾ ಮೃತಪಟ್ಟವರು. ಆಗಸ್ಟ್ 29 ರಂದು ಇವರು ವಿಷ ಸೇವಿಸಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಪತಿ ಬಾಬು ಒಂದೂವರೆ ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಗಲ್ಫ್ ಗೆ ಮರಳಿದ್ದರು. ಬಳಿಕ ಪತಿ ಮನೆಯವರು ಅಪಪ್ರಚಾರ ನಡೆಸಿ ಕಿರುಕುಳ ನೀಡಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಹೋದರ ಸಂತೋಷ್ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದಾರೆ.