ಮಂಗಳೂರು, ಮೇ 15 (DaijiworldNews/MS): ಕೋವಿಡ್-19 ಲಸಿಕಾ ಶಿಬಿರಕ್ಕೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು (ಮೇ 15) ಜಿಲ್ಲೆಯಾದ್ಯಂತ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಲಸಿಕೆ ಎರಡನೇ ಡೋಸನ್ನು ಮಾತ್ರ ನೀಡಲಾಗುವುದು.
ಲಸಿಕಾ ಶಿಬಿರಗಳ ಸ್ಥಳ ಬದಲಾವಣೆ:
ಮಂಗಳೂರು ತಾಲೂಕಿನ ನಗರ ಆರೋಗ್ಯ ಕೇಂದ್ರ ಬಿಜೈಯಲ್ಲಿರುವ ಲಸಿಕಾ ಶಿಬಿರವನ್ನು ಬಿಜೈ ಕಾಪಿಕಾಡು ಸರಕಾರಿ ಶಾಲೆಯಲ್ಲಿ, ನಗರ ಆರೋಗ್ಯ ಕೇಂದ್ರ ಕೂಳೂರು, ಕುಂಜತಬೈಲು ಇಲ್ಲಿಯ ಶಿಬಿರವನ್ನು ಸರಕಾರಿ ಶಾಲೆ ಮರಕಡ, ನಗರ ಆರೋಗ್ಯ ಕೇಂದ್ರ ಶಕ್ತಿನಗರ ಇಲ್ಲಿಯ ಶಿಬಿರವನ್ನು ನಾಲ್ಯಪದವು ಸರಕಾರಿ ಶಾಲೆ(ಕುವೆಂಪು ಶಾಲೆ), ಹಾಗೂ ನಗರ ಆರೋಗ್ಯ ಕೇಂದ್ರ ಪಡೀಲ್ ಇಲ್ಲಿಯ ಲಸಿಕಾ ಶಿಬಿರವನ್ನು ಅಮೃತ ಕಾಲೇಜು ಪಡೀಲ್ ಹಾಗೂ ನಗರ ಲೇಡಿಹಿಲ್ನಲ್ಲಿರುವ ಶಿಬಿರವನ್ನು ಗಾಂಧಿನಗರ ಸರಕಾರಿ ಶಾಲೆ ಇಲ್ಲಿಗೆ ಸ್ಥಳಾಂತರಿಸಿ ಶಿಬಿರವನ್ನು ನಡೆಸಲಾಗುವುದು.
ಇನ್ನುಳಿದ ಜೆಪ್ಪು, ಬಂದರ್, ಎಕ್ಕೂರು, ಬೆಂಗ್ರೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಳಾವಕಾಶವಿದ್ದು ಅಲ್ಲಿಯೇ ಲಸಿಕೆ ವಿತರಣೆ ನಡೆಯಲಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.