ಮಂಗಳೂರು, ಮೇ.15 (DaijiworldNews/PY): ಎಂಜಿನ್ ಸಮಸ್ಯೆಯ ಕಾರಣದಿಂದ ಸಮುದ್ರದಲ್ಲಿ ಮೀನುಗಾರಿಕಾ ದೋಣಿಯೊಂದು ಸಿಲುಕಿದ ಪರಿಣಾಮ ಅಪಾಯದಲ್ಲಿ ಸಿಲುಕಿದ್ದ ಮೂವರು ಮೀನುಗಾರರನ್ನು ಭಾರತೀಯ ಕೋಸ್ಟಲ್ ಗಾರ್ಡ್ ತಂಡ ರಕ್ಷಿಸಿದೆ.

ಕೇರಣದ ಕಣ್ಣೂರಿನಿಂದ ಸುಮಾರು 10 ನಾಟಿಕಲ್ ದೂರದಲ್ಲಿ ಮೀನುಗಾರಿಕಾ ದೋಣಿಯ ಯಂತ್ರ ಕೆಟ್ಟು ಹೋಗಿ ನಿಂತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ವಿಕ್ರಮ್ ನೌಕೆ ಮೂಲಕ ಕಾರ್ಯಾಚರಣೆ ನಡೆಸಿ ಮೂವರು ಕೇರಳ ಮೀನುಗಾರರನ್ನು ರಕ್ಷಿಸಿದೆ.
ಮೀನುಗಾರರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ತೌಕ್ತೆ ಚಂಡಮಾರುತದ ಹಿನ್ನೆಲೆ ಕರಾವಳಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಗೆ ನೀಡಲಾಗಿದೆ.