ಉಡುಪಿ, ಮೇ.15 (DaijiworldNews/HR): ದೇಶದಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹೇರಳಾಗಿರುವ ಲಾಕ್ಡೌನ್ ನಿಂದಾಗಿ ದುಡಿದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ನಿರಾಶ್ರಿತರಿಗೆ ಈಗ ದಿಕ್ಕು ತೋಚದಂತಾಗಿದ್ದು, ಅವರ ಹಸಿವೆಯನ್ನು ತಣಿಸಲು ಈ ಬಾರಕೂರಿನ ಒಂದು ಯುವಕರ ತಂಡ ಮಧ್ಯಾಹ್ನ ಮತ್ತು ರಾತ್ರಿ ಹೊತ್ತಿನ ಆಹಾರ ಒದಗಿಸುವ ವ್ಯವಸ್ಥೆಗೆ ಮುಂದಾಗಿದ್ದು, ಈಗಾಗಲೇ ಹಲವಾರು ಕಡೆಗಳಿಂದ ಕರೆ ಬರುತ್ತಿದ್ದು ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ.

ಸಾಂಧರ್ಭಿಕ ಚಿತ್ರ
ಬ್ರಹ್ಮಾವರದ ಆಸು ಪಾಸಿನ 5 ರಿಂದ 7 ಕಿ.ಮೀ. ಒಳಗೆ ಯಾರಾದರೂ ನಿರಾಶ್ರಿತರು ಊಟಕ್ಕಾಗಿ ಪರದಾಡುತ್ತಿದ್ದದ್ದು ಕಂಡುಬಂದಲ್ಲಿ ಈ ಕೆಳಗಿನ ನಂಬರಿಗೆ ಮಾಹಿತಿಯನ್ನು ನೀಡಿಬಹುದು, ಅವರಿರುವ ಜಾಗಕ್ಕೆ ಊಟವನ್ನು ತಲುಪಿಸುವ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎಂದು ಗಿರಿಧರ್ ಶೈಣೈ ಮತ್ತು ಅವರ ತಂಡ ಮುಂದೆ ಬಂದಿದೆ.
ಸಂಪರ್ಕಿಸಬೇಕಾದ ಸಂಖ್ಯೆ:
ಗಿರಿಧರ ಪೈ - 78297 99977
ವರುಣ ಪೈ - 96325 88183
ದಿನಾಂಕ 12/05/2021 ಬುಧವಾರದಿಂದ ಲಾಕ್ಡೌನ್ ಮುಗಿಯುವ ದಿನದ ತನಕ ಈ ಸೇವೆ ಲಭ್ಯವಿರುತ್ತದೆ.
ಸಮಯ:
ಮಧ್ಯಾಹ್ನ - 12 ರಿಂದ 2.30
ಸಂಜೆ - 6 ರಿಂದ 8