ಉಳ್ಳಾಲ, ಮೇ 15 (DaijiworldNews/MS): ಕೊರೊನಾ ನಿಯಂತ್ರಣಕ್ಕೆ ರಾಜ್ಯವ್ಯಾಪ್ತಿ ಹೇರಲಾಗಿರುವ ಲಾಕ್ ಡೌನ್ ನಡುವೆಯೇ ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಲಪಾಡಿ ಗ್ರಾಮದ ವಿದ್ಯಾನಗರ ಬಳಿಯ ಫಲಾಹ್ ಶಾಲೆ ಬಳಿ ನಿವಾಸಿ ಯು.ನಝೀರ್ ಎಂಬವರ ಪುತ್ರ ಶೇಖ್ ಝಾಯಿದ್ ನಿಝ್ಮಾನ್ (19) ನಾಪತ್ತೆಯಾದವರು. ಮೇ.13 ರಂದು ಮದ್ಯಾಹ್ನ ಮನೆಯಿಂದ ಹೊರಹೋದವರು ಮನೆಗೆ ಹಿಂತಿರುಗಿಲ್ಲ. ಮನೆ ಸುತ್ತಮುತ್ತಲು, , ಸಂಬಂಧಿಕರ ಮನೆ, ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ.
ಈ ಬಗ್ಗೆ ತಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಂತೆ ನಾಪತ್ತೆ ಪ್ರಕರಣ ದಾಖಲಾಗಿದೆ.