ಬೆಳ್ಮಣ್, ಮೇ.15 (DaijiworldNews/PY): ಮನೆಯ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೋಳ ಕೋಡಿ ಎಂಬಲ್ಲಿ ನಡೆದಿದೆ.


ಮೃತರನ್ನು ಬೋಳ ಕೋಡಿ ನಿವಾಸಿ ಲತೇಶ್ ಕುಮಾರ್ (65) ಎಂದು ಗುರುತಿಸಲಾಗಿದೆ.
ಲತೇಶ್ ಕುಮಾರ್ ಅವರು ತಮ್ಮ ಮನೆಯ ಸಮೀಪ ಕೃಷಿ ಕೆಲಸ ಮಾಡುತ್ತಿರುವ ಸಂದರ್ಭ ಆಕಸ್ಮಿಕವಾಗಿ ಬಾವಿಗೆ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.