ಉಡುಪಿ, ಮೇ.15 (DaijiworldNews/HR): ಚಂಡಮಾರುತದಿಂದಾಗಿ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಸಮುದ್ರ ತೀರದ ಪ್ರದೇಶಗಳಲ್ಲಿ ಹೆಚ್ಚಾಗಿ ಪರಿಣಾಮ ಬೀರುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಲು ನಾನು ತಹಶೀಲ್ದಾರ್ಗಳಿಗೆ ಸೂಚನೆ ನೀಡಿದ್ದು, ಮಳೆಯಿಂದಾಗಿ ಹಾನಿಗೊಳಗಾದವರು ಸಹಾಯಕ್ಕಾಗಿ ಆಯಾ ತಹಶೀಲ್ದಾರ್ ಅವರನ್ನು ಸಂಪರ್ಕಿಸಬಹುದು "ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಪಡುಕೆರೆ, ಮಲ್ಪೆ, ಮರವಂತೆ ಮತ್ತು ಕರಾವಳಿ ಪ್ರದೇಶದ ಇತರ ಭಾಗಗಳ ಮೇಲೆ ಚಂಡಮಾರುತವು ತನ್ನ ಪರಿಣಾಮವನ್ನು ತೋರಿಸಿದ್ದು, ಉಡುಪಿ ಶಾಸಕ ರಘುಪತಿ ಭಟ್ ಅವರು ಪಡುಕೆರೆ ವಸತಿ ಪ್ರದೇಶಗಳಿಗೆ ಭೇಟಿ ನೀಡಿದರು, ಅಲ್ಲಿ ಸಮುದ್ರದ ನೀರು ಮೀನುಗಾರಿಕಾ ರಸ್ತೆಯನ್ನು ಮುರಿದು ಮನೆಗಳಿಗೆ ಪ್ರವೇಶಿಸಿದೆ. ಮಲ್ಪೆ ಮೊಗವೀರ ಸಭಾಭವನದಲ್ಲಿ ಪುನರ್ವಸತಿಗಾಗಿ ವ್ಯವಸ್ಥೆ ಮಾಡಲಾಗಿದೆ. ಶಾಸಕ ರಘುಪತಿ ಭಟ್ ಅವರು ಪಡುಕೆರೆಯ ನಿವಾಸಿಗಳಿಗೆ ತಮ್ಮನ್ನು ಈ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಮನವರಿಕೆ ಮಾಡಿದ್ದಾರೆ.
ಇನ್ನು ಮಲ್ಪೆಯಲ್ಲಿ ಚಂಡಮಾರುತರಿಂದ 8ಕ್ಕೂ ಹೆಚ್ಚು ದೋಣಿಗಳು ಹಾನಿಗೊಂಡಿದ್ದು, ಮೀನುಗಾರರು ಚಂಡಮಾರುತದ ಸಮಯದಲ್ಲಿ ಸಹ ಕ್ರೇನ್ ಬಳಸಿ ಹೆಚ್ಚಿನ ದೋಣಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಗಾಳಿ ಮತ್ತು ಮಳೆ ಒಂದೇ ವೇಗದಲ್ಲಿ ಮುಂದುವರಿದರೆ ಹೆಚ್ಚಿನ ಹಾನಿಯಾಗಬಹುದೆಂದು ನಾಳೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ನೀಡಲಾಗುತ್ತದೆ.