ಕಾಸರಗೋಡು, ಮೇ.15 (DaijiworldNews/HR): ಜಾನಪದ ಕಲಾವಿದ ಶತಾಯುಷಿ ನಿಟ್ಟೋಣಿ(105 ) ಶನಿವಾರ ನಿಧನರಾಗಿದ್ದಾರೆ.

ದೈವಕೋಲ ಕಲೆಯ ಗುರುವಾಗಿದ್ದ ನಿಟ್ಟೋಣಿರವರು, ಹಲವಾರು ಮಂದಿಗೆ ಮಾರ್ಗದರ್ಶಕರಾಗಿದ್ದರು. ಬೆಳ್ಳೂರು ನಾಟೆಕಲ್ಲು ಕುದು ನಿವಾಸಿಯಾಳಗಿದ್ದ ಇವರು ನಾಟಿವೈದ್ಯರು ಕೂಡ ಆಗಿದ್ದರು.
ಇನ್ನು ನಿಟ್ಟೋಣಿ ಅವರನ್ನು ಕರ್ನಾಟಕ ಜಾನಪದ ಅಕಾಡಮಿ, ಕಾಸರಗೋಡು ವಾರ್ತಾ ಇಲಾಖೆ ವತಿಯಿಂದ ಗೌರವಿಸಲಾಗಿತ್ತು.
ಮೃತರು ಪತ್ನಿ, ನಾಲ್ವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.