ಉಡುಪಿ,ಸೆ.5: ಸಿಎಂ ಸಿದ್ದರಾಮಯ್ಯ ಅವರ ಹ್ಯೂಬ್ಲೋ ವಾಚ್ ಪ್ರಕರಣದ ಹಿಂದೆ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಪ್ರಧಾನ ಮಂತ್ರ್ರಿಗೆ ಪತ್ರ ಬರೆದಿರುವುದಾಗಿ ಮಾಜಿ ಡಿವೈಎಸ್ಪಿ ಅನುಪಮ ಶೆಣೈ ತಿಳಿಸಿದ್ದಾರೆ. ಉಡುಪಿಯಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು ಪ್ರಧಾನಿ ಕಚೇರಿಗೆ ಪತ್ರ ಬರೆದಿರುವುದಕ್ಕೆ ಒಂದುವರೆ ತಿಂಗಳ ಬಳಿಕ ಉತ್ತರ ಬಂದಿದ್ದು, ಪತ್ರವನ್ನು ಸರ್ಕಾರದ ಇನ್ನೊಂದು ಕಚೇರಿಗೆ ತಲುಪಿದೆ ಎಂದರು.
ವಾಚ್ ಪ್ರಕರಣ ಸಿಬಿಐಗೆ ಒಪ್ಪಿಸದಿದ್ದರೆ ಕೋರ್ಟ್ ಗೆ ಹೋಗಿ ಸಿಬಿಐ ತನಿಖೆಗೆ ಒಪ್ಪಿಸುವಂತೆ ಮಾಡಲು ತಿಳಿದಿದೆ ಎಂದು ಗೃಹ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸದರು. ಇದೇ ಸಂದರ್ಭ ಪೋಲಿಸರ ದುಸ್ಥಿತಿಯ ಬಗ್ಗೆ ಹೇಳಿ ಭಾವುಕರಾದರು. ಸಿಐಡಿ ಕತೆ ಎಲ್ಲರಿಗೂ ಗೊತ್ತಿದೆ. ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಎಫ್ ಎಸ್ಎಲ್ ವರದಿ ಬಂದಿದ್ದರೂ ತನಿಖೆ ನಡೆಸದೆ ಕ್ಲೀನ್ಚಿಟ್ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.